ಯಾದಗಿರಿ | ಜಾತಿ ನಿಂದನೆ ಕೇಸ್ ಗೆ ಹೆದರಿ ಮಗ ಆತ್ಮಹತ್ಯೆ; ವಿಷಯ ತಿಳಿದು ತಂದೆ ಹೃದಯಾಘಾತದಿಂದ ಮೃತ್ಯು

ಮಹೆಬೂಬ್, ಸೈಯದ್
ಯಾದಗಿರಿ: ಜಮೀನಿಗೆ ಹೋಗುವ ದಾರಿಯ ವಿಚಾರವಾಗಿ ದಲಿತ ಸಮುದಾಯದವರು ಜಾತಿ ನಿಂದನೆ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ವಡಿಗೆರಾ ತಾಲ್ಲೂಕಿನಲ್ಲಿ ನಡೆದಿದೆ. ಈ ವಿಚಾರ ತಿಳಿದು ಯುವಕನ ತಂದೆ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮೆಹಬೂಬ್ (21) ಹಾಗೂ ಹೃದಯಾಘಾತದಿಂದ ಮೃತಪಟ್ಟವರನ್ನು ಸೈಯದ್ (50) ಎಂದು ಗುರುತಿಸಲಾಗಿದೆ.
ಜಮೀನಿಗೆ ಹೋಗುವ ದಾರಿಯ ವಿಚಾರವಾಗಿ ಮೃತರು ಮತ್ತು ದಲಿತರ ನಡುವೆ ಕೆಲವು ದಿನಗಳ ಹಿಂದೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಕುರಿತು ಗ್ರಾಮದ ಮುಖಂಡರು ನ್ಯಾಯ ಪಂಚಾಯತ್ ಮಾಡಿ ಬಗೆಹರಿಸಿದ್ದರು. ಆದರೆ, ಮತ್ತೆ ಅದೇ ವಿಚಾರವಾಗಿ ಜಾತಿ ನಿಂದನೆ ಕೇಸ್ ಮಾಡುತ್ತೇವೆ ಎಂದು ದಲಿತ ಸಮುದಾಯದವರು ಹೆದರಿಸಿದ್ದಾರೆ. ಇದಕ್ಕೆ ಯುವಕ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.





