ಯಾದಗಿರಿ | ಕಮಿಷನರ್ ದಯಾನಂದ್ ಅವರ ಅಮಾನತು ರದ್ದುಗೊಳಿಸಲು ರಾಜ್ಯ ಬೇಡರ ಸಮಿತಿ ಮನವಿ

ಸುರಪುರ : ಬೆಂಗಳೂರಿನ ಕಾಲ್ತುಳಿತ ದುರಂತದ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ರವರನ್ನು ಹೊಣೆಯನ್ನಾಗಿ ಮಾಡಿ ಪೊಲೀಸ್ ಕಮಿಷನರ್‌ರಾದ ದಯಾನಂದ್ ಅವರನ್ನು ಕಾರಣವಿಲ್ಲದೆ ಅಮಾನತ್ತು ಮಾಡಿರುವುದನ್ನು ವಿರೋಧಿಸಿ ಹಾಗೂ ಅಮಾನತ್ತು ವಾಪಸ್ ಪಡೆದು ಅದೇ ಕಮಿಷನರ್ ಹುದ್ದೆಯಲ್ಲಿ ಮುಂದುವರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಬೇಡರ ಸಮಿತಿ ವತಿಯಿಂದ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮುಖಂಡರು, ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡದೆ ಈ ಅನಾಹುತ ಸಂಭವಿಸಿದ್ದು, ಇದರಲ್ಲಿ ಪೊಲೀಸ್ ಕಮಿಷನರ್ ಅವರ ಯಾವುದೇ ಲೋಪ ಇಲ್ಲದಿದ್ದರೂ ಅಮಾನತು ಮಾಡಿರುವುದು ಖಂಡನೀಯವಾಗಿದೆ. ಲೋಪ ಎಸಗಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಕಮಿಷನರ್ ದಯಾನಂದ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಹುಸೇನ್ ಸಾಬ್ ಎ.ಸರಕಾವಸ್ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ ನಾಯಕ, ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಶ್ರೀನಿವಾಸ್ ದೊರೆ ಮಾಲಗತ್ತಿ, ಸುರಪುರ ನಗರ ಘಟಕ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿಗಳಾದ ಬಲಭೀಮ ನಾಯಕ್ ನ್ಯಾಯವಾದಿಗಳು, ಕರ್ನಾಟಕ ರಾಜ್ಯ ಬೇಡರ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪರಮಣ್ಣ ವಡಕೇರಿ ಕಕ್ಕೇರಾ ಹಾಗೂ ಸಮಾಜದ ಮುಖಂಡರಾದ ಮೌನೇಶ್ ಮಲ್ಲಿಬಾವಿ, ದುರ್ಗಪ್ಪ ನಾಯಕ್ ಹಾಗೂ ಬಸವರಾಜು ಗುಂಡಕನಾಳ ಉಪಸ್ಥಿತರಿದ್ದರು.