ಯಾದಗಿರಿ | ಸರ್ಕಾರದಿಂದಲೇ ಕೋಲೂರ ಮಲ್ಲಪ್ಪ ಸ್ಮಾರಕ ಭವನದ ಕೆಲಸವಾಗಲಿ : ವಿವಿಧ ಸಂಘಟನೆಗಳಿಂದ ಆಗ್ರಹ

ಯಾದಗಿರಿ: ಸ್ವಾತಂತ್ರ್ಯಹೋರಾಟಗಾರ, ಕಲ್ಯಾಣ ಕರ್ನಾಟಕದ ಗಾಂಧೀ ಎಂದೇ ಪ್ರಖ್ಯಾತಿಯಾದ ಕೋಲೂರ ಮಲ್ಲಪ್ಪ ಅವರ ಸ್ಮಾರಕ ಭವನದ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಅವರ ಹೆಸರಲ್ಲಿ ಕೆಲವರು ರಚಿಸಿಕೊಂಡಿರುವ ಟ್ರಸ್ಟ್ ಗೆ ನೀಡದೇ ನೇರವಾಗಿ ಸರ್ಕಾರವೇ ಖರ್ಚು ಮಾಡುವ ಮೂಲಕ ಕೆಲಸ ಮಾಡಿಸಬೇಕೆಂದು ಕೋಲೂರ ಮಲ್ಲಪ್ಪ ಅಭಿಮಾನಿಗಳ ಬಳಗದ ಪದಾಧಿಕಾರಿಗಳು, ಕನ್ನಡ ಪರ ಹೋರಾಟಗಾರರು, ಪ್ರದೇಶ ಕುರುಬರ ಸಂಘದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಹಣಮಂತ್ರಾಯಗೌಡ ಮಾಲಿಪಾಟೀಲ್ ತೇಕರಾಳ, ತಾಲೂಕು ಕುರುಬ ಸಮಾಜದ ಮಾಜಿ ಅಧ್ಯಕ್ಷ ಹೊನ್ನಪ್ಪ ಮುನ್ನೂರು, ಕನ್ನಡಪರ ಹೋರಾಟಗಾರರಾದ ಮೈಲಾರಪ್ಪ ಜಹಗೀರಿದಾರ, ಮಲ್ಲಿಕಾರ್ಜುನ ಎಸ್. ಮೇಟಿ, ಮರಿಲಿಂಗಪ್ಪ ಸಾಹುಕಾರ ಕುಮನೂರು, ಭೀಮರಾಯ ಭಂಡಾರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಮಾಳಿಂಗರಾಯ ಕಂದಳ್ಳಿ, ಶ್ರೀಶೈಲ್ ಪೂಜಾರಿ, ಫಕೀರಪ್ಪ ಪೂಜಾರಿ, ಮರಿಲಿಂಗಪ್ಪ ಗಡ್ಡೆಸೂಗುರು, ಲಕ್ಷ್ಮಣ ಪೂಜಾರಿ, ಬಸವರಾಜ ಹೊರಟೂರ, ಮೌನೇಶ ದೋರನಹಳ್ಳಿ, ದೇವಿಂದ್ರಪ್ಪ ಮಾಡಗಿ ದೊರನಹಳ್ಳಿ, ಹಣಮಂತ್ರಾಯ ಜಡಿ ಪಗಲಾಪುರ, ಸಿದ್ದು ಪೂಜಾರಿ ಕನಕ ನಗರ ಸಿದ್ದು ಪೂಜಾರಿ ಪಗಲಾಪೂರ, ಗುಂಜಲಪ್ಪ ಪಗಲಾಪೂರ, ಮಲ್ಲಯ ಪೂಜಾರಿ, ಮಲ್ಲಿಕಾರ್ಜುನ ರೆಡ್ಡಿ ಬಂದಳ್ಳಿ, ಸೇರಿದಂತೆ ಮತ್ತಿತರರು ಇದ್ದರು.