ಯಾದಗಿರಿ | ನೀರಿನ ಹೊಂಡಕ್ಕೆ ಬಿದ್ದು ಮೂವರು ಬಾಲಕರು ಮೃತ್ಯು

ಸಾಂದರ್ಭಿಕ ಚಿತ್ರ
ಯಾದಗಿರಿ : ನೀರು ಕುಡಿಯಲು ಹೋಗಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಮೂವರು ಬಾಲಕರು ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಅಚೋಲಾದಲ್ಲಿ ತಾಂಡದಲ್ಲಿ ನಡೆದಿದೆ.
ಕುರಿ ಕಾಯಲು ಹೋಗಿದ್ದ ಮೂವರು ಬಾಲಕರು ಬೇಸಿಗೆ ಹಿನ್ನೆಲೆ ದಾಹ ತಣಿಸಿಲು ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಕಾಲು ಜಾರಿ ಬಿದ್ದು ಬಾಲಕರು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ
ಅಚೋಲಾ ತಾಂಡಾದ ನಿವಾಸಿಗಳಾದ ಅಮರ್(12) ಜಯ ರಾಠೋಡ್(14) ಕೃಷ್ಣ ರಾಠೋಡ್(10) ಮೃತ ಬಾಲಕರು.
ಯಾದಗಿರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Next Story





