ಯಾದಗಿರಿ | ಭತ್ತ ನಾಟಿ ಮಾಡುವ ವೇಳೆ ಮೈಮೇಲೆ ಬಿದ್ದ ವಿದ್ಯುತ್ ತಂತಿ : ಮೂವರು ಮೃತ್ಯು

ಯಾದಗಿರಿ : ಭತ್ತ ನಾಟಿ ಮಾಡುವ ವೇಳೆ ವಿದ್ಯುತ್ ವಯರ್ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಹುಣಸಗಿ ತಾಲೂಕಿನ ಅಗತಿರ್ಥ ಗ್ರಾಮದ ಭತ್ತದ ಗದ್ದೆಯಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಈರಪ್ಪ (40), ಸುರೇಶ (26), ಮೌನೇಶ್ (22) ಎಂದು ಗುರುತಿಸಲಾಗಿದೆ.
ಮೃತ ದೇಹವನ್ನು ಶುಕ್ರವಾರ ಸಂಜೆ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story





