ಯಾದಗಿರಿ | ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಬೆಂಬಲಿಸಿ ಮೇ 21ರಂದು ತಿರಂಗ ಯಾತ್ರೆ

ಸುರಪುರ : ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಬೆಂಬಲಿಸಿ ಮೇ 21ರಂದು ತಿರಂಗ ಯಾತ್ರೆ ನಡೆಸಲಾಗುವುದು ಎಂದು ಸುರಪುರ ತಾಲೂಕು ದೇಶಭಕ್ತ ನಾಗರಿಕ ಸಮಿತಿ ಮುಖಂಡರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 21ರಂದು ಸಾಯಂಕಾಲ 4 ಗಂಟೆಗೆ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧಿ ವೃತ್ತದವರೆಗೆ ತಿರಂಗ ಯಾತ್ರೆ ನಡೆಯಲಿದ್ದು,ಯಾತ್ರೆಯಲ್ಲಿ ಎಲ್ಲ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಎಲ್ಲಾ ನಾಗರಿಕರು ಇದರಲ್ಲಿ ಭಾಗವಹಿಸುವ ಮೂಲಕ ಸೇನೆಗೆ ನಮ್ಮ ಅಭಿನಂದನೆಯ ಗೌರವ ಸಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಸಮಿತಿ ಮುಖಂಡರಾದ ಡಾ.ಉಪೇಂದ್ರ ನಾಯಕ ಸುಬೇದಾರ, ಲಕ್ಷ್ಮೀಕಾಂತ ದೇವರಗೋನಾಲ,ವೆಂಕಟೇಶ ನಾಯಕ ಬೈರಿಮರಡಿ,ಶರಣು ನಾಯಕ ಇತರರು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂದೀಪ ಜೋಷಿ,ಶರಣು ನಾಯಕ ಬಿಚಗತ್ತಕೇರಾ,ಅರವಿಂದ ಬಿಲ್ಲವ್,ಮೌನೇಶ ನಾಯಕ ನಾಯ್ಕೊಡಿ, ಗಂಗಾಧರ ನಾಯಕ ಅರಳಳ್ಳಿ,ಭೀಮು ನಾಯಕ ಮಲ್ಲಿಬಾವಿ, ವಿನೋದ ಕುಮಾರ ಯಾಳಗಿ, ಮಲ್ಲು ವಿಷ್ಣುಸೇನಾ,ಕ್ಯಾತಪ್ಪ ಮೇದಾ,ಲೊಕೇಶ ನಾಯಕ,ದೇವು ನಾಯಕ ಚಂದ್ಲಾಪುರ,ರಮೇಶ ಚೆನ್ನೂರ,ಹಣಮೆಗೌಡ ಶಖಾಪುರ,ಮಂಜುನಾಥ ಚೆಟ್ಟಿ ರುಕ್ಮಾಪುರ ಇತರರು ಭಾಗವಹಿಸಿದ್ದರು..







