Yadgiri | ಗಣೇಶ್ ಹಬ್ಬದ ಪ್ರಯುಕ್ತ ಬೆಳಗೇರಾ ಯುವಕರಿಂದ ಗಿಡ ನೆಡುವ ಕಾರ್ಯಕ್ರಮ

ಯಾದಗಿರಿ: ಜಿಲ್ಲೆಯ ಬೆಳಗೇರಾ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಗಜಾನನ ತರುಣ ಸಂಘದ ವತಿಯಿಂದ 2026ನೇ ಸಾಲಿನ ಗಣೇಶೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೆಳಗೇರಾ ಸರ್ಕಾರಿ ಹಿರಿಯ ಪ್ರೌಢಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಗಣೇಶೋತ್ಸವದ ಸಿದ್ಧತೆಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಕಾಶಪ್ಪ, ಶಿವಶಂಕರ ಬಾಗ್ಲಿ, ರವಿ ಪವಾರ್, ಈರಣ್ಣ, ಹಜರತ್, ಮೌಲನ್, ನಿಜು ಹಾಗೂ ಸಂಘದ ಸದಸ್ಯರಾದ ಭೀಮು, ಆಂಜನೇಯ, ಹಣಮೇಶ್, ನಾಗೇಶ್, ರಾಜು, ವೆಂಕಟೇಶ್, ಬಸ್ಸು, ಲಚ್ಚು, ಸಾಬು, ಬಸವರಾಜ್, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story




