ಯಾದಗಿರಿ | ಮಹಿಳೆಯರು ಕೂಡ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುವುದು ಅಗತ್ಯ : ಪ್ರಕಾಶ ಅಂಗಡಿ

ಯಾದಗಿರಿ : ಮಹಿಳೆಯರು ಸಹಕಾರ ಜ್ಞಾನಪಡೆದು ಸ್ವಾವಲಂಬಿಗಳಾಗಿ ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚು ಜ್ಞಾನ ಪಡೆಯುವ ಮೂಲಕ ಮಹಿಳೆಯರು ಕೂಡ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುವುದು ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಮಹಿಳೆಯರು ಕೂಡ ಸಹಕಾರಿಗಳಾಗಿ ಸ್ವಾವಲಂಬಿಗಳಾಗಿ, ಮಾದರಿ ವ್ಯಕ್ತಿಗಳಾಗಬೇಕು ಎಂದು ಯಾದಗಿರಿ ಜಿಲ್ಲಾ ಸಹಕಾರಿ ಒಕ್ಕೂಟದ ವೃತ್ತಿಪರ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿ, ಯಾದಗಿರಿ ಮತ್ತು ಶ್ರೀ ಅಕ್ಕಮಹಾದೇವಿ ಮಹಿಳಾ ಸಹಕಾರ ಸಂಘ ನಿ. ರಂಗಂಪೇಠ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳೆಯರಿಗೆ ಕ್ಲಸ್ಟರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುರಪುರ ತಾಲೂಕು ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕರಾದ ಸವಿತಾ ಪಾಲ್ಕಿ ರಾಷ್ಟ್ರಿಯ ಗ್ರಾಮಿಣ ಜೀವನೋಪಾಯ ಮಿಷನ್ ಮತ್ತು ಸ್ವಸಹಾಯ ಸಂಘಗಳ ಆದಾಯ ಉತ್ಪನಗಳ ಕಾರ್ಯಚಟುವಟಿಕೆಗಳ ಕುರಿತು ಮತ್ತು ಎನ್ ಆರ್ ಎಂ ಎಲ್ ವತಿಯಿಂದ ಸಾಲ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಜಿಲ್ಲಾ ಸಹಕಾರ ಶಿಕ್ಷಕರಾದ ಸುಜಾತ ಮಠ, ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೀಲಾಂಬಿಕೆ ಪಾಟೀಲ ನಿರ್ದೇಶಕರಾದ ಸುನೀತಾ ಪಾಟೀಲ್ ರೇಷ್ಮಾ ಬೇಗಂ, ನಫೀಸ ಬೇಗಂ, ಸುರಕ್ಷಾ ಸಂಘದ ಕಾರ್ಯದರ್ಶಿಗಳಾದ ಶ್ರೀ ಮೌನೇಶ ನಾಲವಾರ ವೇದಿಕೆ ಮೇಲಿದ್ದರು, ಕಾರ್ಯಕ್ರಮವನ್ನು ಸುಜಾತ ನಿರೂಪಿಸಿ ವಂದಿಸಿದರು ಶಿಲ್ಪಾ ಸಂಗಡಿಗರು ಪ್ರಾರ್ಥಿಸಿದರು.