ಯಾದಗಿರಿ | ಕಾರ್ಮಿಕರಿಂದ ಕಾರ್ಮಿಕ ದಿನಾಚರಣೆ

ಯಾದಗಿರಿ : ಕಾರ್ಮಿಕರ ಶ್ರಮ ಹಾಗೂ ವೃತ್ತಿಯನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸುವಂತಹ ಕೆಲಸವಾಗಬೇಕು ಎಂದು ಭಾಗಪ್ಪ ಕಾಗಿ ತಿಳಿಸಿದರು.
ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಗರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಕಾರ್ಮಿಕ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾಗಪ್ಪ ಕಾಗಿ, ಬಸ್ಸಪ್ಪ ದೆವತ್ಗಲ್, ಮಲ್ಲಪ್ಪ ಬುಸೇಟಿ, ಮಲ್ಲಪ್ಪ ಕಾಗಿ, ರಾಹುಲ್ ಮೌರ್ಯ, ಜೀವನ್ ಚಟ್ಟೇರಕರ್, ಮಲ್ಲು ಕೋಲ್ಲೂರಕರ್, ತಾಯಪ್ಪ ಬುಸೇಟಿ ಇದ್ದರು.
Next Story





