ಯಾದಗಿರಿ | ಯುವ ಘಟಕಕ್ಕೆ ಹೆಚ್ಚಿನ ಸದಸ್ಯತ್ವ ಆಗಬೇಕು: ನಿಗಮ್ ಭಂಡಾರಿ
ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿ ಸಭೆ

ಯಾದಗಿರಿ: ದೇಶದಲ್ಲಿ ಯುವ ಕಾಂಗ್ರೆಸ್ ನಾಗಲೋಟ್ ದಲ್ಲಿ ಬೆಳೆಯುತ್ತಿದೆ. ಜಿಲ್ಲೆ ಪ್ರತಿ ಮುಖಂಡ, ಪದಾಧಿಕಾರಿ ಹಾಗೂ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಎಲ್ಲಡೆ ವಿವಿಧ ತಾಲೂಕುಗಳ ಗ್ರಾಮಗಳಿಗೆ ಸಂಚರಿಸಿ ಯುವ ಘಟಕಕ್ಕೆ ಸದಸ್ಯತ್ವ ನೀಡಬೇಕೆಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.
ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಧ್ಯಾಹ್ನ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಪಕ್ಷದ ವರಿಷ್ಠ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕನಸು ಏನಂದರೇ, ದೇಶದಲ್ಲಿ ಯುವ ಶಕ್ತಿ ಬಲಿಷ್ಠಗೊಳ್ಳಬೇಕು. ಆ ಮೂಲಕ ಬಡವರ, ರೈತರ, ಕಾರ್ಮಿಕರ ಹೀಗೆ ವಿವಿಧ ಹಂತದ ನೊಂದವರ ಪರವಾಗಿ ಕೆಲಸ ಮಾಡುವ ಮೂಲಕ ದೇಶ ಕಟ್ಟಬೇಕೆಂದರು.
ಬೀದರ್ ಜಿಲ್ಲೆಯಿಂದ ಪ್ರವಾಸ ಆರಂಭವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಯುವ ಘಟಕ ಗಟ್ಟಿಯಾಗಿದೆ ಎಂದರು.
ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥಗೌಡ, ಯುವ ಘಟಕದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಚಿತ್ರಾ ಕೊಂಕಲ್, ಜಿಲ್ಲಾಧ್ಯಕ್ಷ ರಾಜಾಕುಮಾರ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು.
ರಾಷ್ಟ್ರೀಯ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ನಾಗೇಶ, ಕಾಂಗ್ರೆಸ್ ಮುಖಂಡರಾದ ಸನ್ನಿಗೌಡ (ಪಂಪಣ್ಣಗೌಡ), ಜಿಲ್ಲಾ ಅಧ್ಯಕ್ಷ ಬಸರೆಡ್ಡಿ ಅನಪೂರ್, ಅನೀಲ್ ಕುಮಾರ ಹೆಡಗಿಮದ್ರಿ, ಸಲೀಮ್, ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ್, ಭೀಮರಾಯ ಠಾಣಗುಂದಿ, ಲಲಿತಾ, ಶ್ಯಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಮೇಟಿ, ಡಾ.ವಿಜಯಕುಮಾರ ಪಾಟೀಲ್, ಹಣಮಂತರಾಯ, ಮಾಣಿಕರೆಡ್ಡಿ ದೇಸಾಯಿ ಸೇರಿದಂತೆಯೇ ಸಾವಿರಾರು ಯುವ ಕಾರ್ಯಕರ್ತರು ಭಾಗವಹಿಸಿದ್ದರು.
ಆರಂಭದಲ್ಲಿ ಅಬ್ಬೆತುಮಕೂರು ಕ್ರಾಸ್ ದಿಂದ ಕಾರ್ಯಕರ್ಮದ ವೇದಿಕೆಯವರೆಗೂ ಕಾರ್ ರ್‍ಯಾಲಿ ನಡೆಯುತು.







