ಕೆಎಸ್‌ಸಿಎ ರಾಜ್ಯ ತಂಡಕ್ಕೆ ಯಾದಗಿರಿಯ ಶ್ವೇತಾ ಆಯ್ಕೆ

ಯಾದಗಿರಿ: ಬಿಸಿಸಿಐ 15 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿಯ ಆಯ್ಕೆ ಪಂದ್ಯಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಪ್ರಕಟಿಸಿರುವ ರಾಜ್ಯ ತಂಡಕ್ಕೆ ಯಾದಗಿರಿಯ ಗಾಂಧಿ ನಗರದ ದಲಿತ ಸಮುದಾಯಕ್ಕೆ ಸೇರಿದ ಬಾಲಕಿ ಶ್ವೇತಾ ಹತ್ತಿಮನಿ ಆಯ್ಕೆಯಾಗಿದ್ದಾರೆ.
ನವನಂದಿ ವಿಂಗ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿರುವ ಶ್ವೇತಾ ಹತ್ತಿಮನಿ ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಶ್ವೇತಾ ಹತ್ತಿಮನಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಎಸ್‌ಸಿಎ ಗ್ರೂಪ್-ಎ ಅಲ್ಲಿನ ಟೀಮ್-ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬಾಲಕಿಯ ಸಾಧನೆಗೆ ನಗರಸಭೆ ಸದಸ್ಯರಾದ ಹಣಮಂತ ಇಟಗಿ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.
Next Story





