ಯಲಬುರ್ಗಾ | ವಾಲ್ಮೀಕಿ ನಾಯಕ ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯ : ರಾಮಣ್ಣ ಕಲ್ಲಣ್ಣವರ

ಯಲಬುರ್ಗಾ : ವಾಲ್ಮೀಕಿ ನಾಯಕ ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯವಾಗಿದ್ದು, ಸಮ ಸಮಾಜ ನಿರ್ಮಾಣ, ಆರ್ಥಿಕ ಸಬಲೀಕರಣ, ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಸಹಕಾರಿಯಾಗುತ್ತದೆ. ಸಂಘಟನೆಯಿಂದ ಸಮುದಾಯವು ತನ್ನ ಹಕ್ಕುಗಳನ್ನು ಪಡೆಯಲು ಶಕ್ತಿಯನ್ನುಗಳಿಸುತ್ತದೆ ಎಂದು ವಾಲ್ಮೀಕಿ ಗುರುಪೀಠದ ಕೊಪ್ಪಳ ಜಿಲ್ಲಾ ಪ್ರತಿನಿಧಿ ರಾಮಣ್ಣ ಕಲ್ಲಣ್ಣವರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ವಾಲ್ಮೀಕಿ ಜಾತ್ರೆ'ಯ ಪೂರ್ವಭಾವಿ ಸಭೆ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಗೆ ವಾಲ್ಮೀಕಿ ಸಮಾಜದ ಕೊಡುಗೆ ಅಪಾರ. ನಮ್ಮ ಇತಿಹಾಸವನ್ನು ಯುವಪೀಳಿಗೆ ಅರ್ಥಮಾಡಿಕೊಳ್ಳಬೇಕು. ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ, ಚುನಾವಣೆ ಮುಗಿದ ನಂತರ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು 'ವಾಲ್ಮೀಕಿ' ಎಂಬ ಭಾವನೆಯಡಿ ಸಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಡಾ. ಕೆ.ಎನ್. ರಾಜಣ್ಣ, ಮಾಜಿ ಅಧ್ಯಕ್ಷ ಮಾನಪ್ಪ ಪೂಜಾರ, ಮುಖಂಡರಾದ ಹನಮೇಶ ನಾಯಕ, ಶರಣಪ್ಪ ಹೊಸಕೇರಿ ಸೇರಿದಂತೆ ಕಾರಟಗಿ ಹಾಗೂ ಕನಕಗಿರಿ ತಾಲೂಕಿನ ಮುಖಂಡರು ಸಂಘಟನೆಯ ಮಹತ್ವದ ಕುರಿತು ಮಾತನಾಡಿದರು.
ಸಭೆಯಲ್ಲಿ ಸರ್ವಾನುಮತದಿಂದ ತಾಲೂಕಿನ ಮಠದ ಧರ್ಮದರ್ಶಿಯಾಗಿ ಫಕೀರಪ್ಪ ತಳವಾರ ಅವರನ್ನು ಆಯ್ಕೆ ಮಾಡಲಾಯಿತು. ಯಲಬುರ್ಗಾ ತಾಲೂಕಿನ ಅಧ್ಯಕ್ಷರಾಗಿ ಯಲ್ಲಪ್ಪ ವೀರಪ್ಪ ಹಡಗಲಿ, ಉಪಾಧ್ಯಕ್ಷರಾಗಿ ದೇವಿಂದ್ರಗೌಡ ಮಾಲಿ ಪಾಟೀಲ, ಚನ್ನಬಸಪ್ಪ ಗುಮಗೇರಿ, ಮುದಿಯಪ್ಪ ಆಡಿನ್ ಹಾಗೂ ಮಾನಪ್ಪ ವಾಲ್ಮೀಕಿ (ಬೇವೂರು) ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತಗೌಡ ಪಾಟೀಲ, ಸಹ ಕಾರ್ಯದರ್ಶಿಯಾಗಿ ಶಶಿ ನಾಯಕ, ಗೌರವ ಅಧ್ಯಕ್ಷರಾಗಿ ಹಂಚಾಳಪ್ಪ ಪೂಜಾರರನ್ನು ನೇಮಕ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ದೇವಪ್ಪ ಪೂಜಾರ (ತಳವಾರ), ಕನಕರಾಯ ಯಾಪಲದಿನ್ನಿ, ಶರಣಪ್ಪ ಗಚ್ಚಿನಮನಿ, ವೆಂಕನಗೌಡ ಪೋಲಿಸ್ ಪಾಟೀಲ, ಬಸವರಾಜ ಜಮಂಬಳ್ಳಿ ಸೇರಿದಂತೆ ಇತರರನ್ನು ಆಯ್ಕೆ ಮಾಡಲಾಯಿತು. ಜಾತ್ರಾ ಸಮಿತಿ ಅಧ್ಯಕ್ಷರಾಗಿ ಯಮನೂರಪ್ಪ ತಳವಾರ ಹಾಗೂ ಸದಸ್ಯರಾಗಿ ದ್ಯಾಮಣ್ಣ ಗೌಡ್ರ, ಶಂಕ್ರಗೌಡ ಪಾಟೀಲ ಸಾಲಭಾವಿ, ಶರಣಗೌಡ ಹೊಸಗೌಡ್ರ, ಬಸವರಾಜ ಪೂಜಾರ, ದುರಗನಗೌಡ ಪೋಲಿಸ್ ಪಾಟೀಲ, ಪರಮೇಶ್ ಚಾಕ್ರಿ, ಹನಮಗೌಡ ಕೋರಿ ಸೇರಿದಂತೆ ಇನ್ನಿತರರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ನೂರಾರು ಮುಖಂಡರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.







