×
Ad

ಹೊಳೆಗೆ ಬಿದ್ದ ಟ್ರ್ಯಾಕ್ಟರ್; ನಾಲ್ವರು ಮಕ್ಕಳ ಸಹಿತ 9 ಮಂದಿ ಮೃತ್ಯು

Update: 2023-08-24 22:41 IST

ಸಾಂದರ್ಭಿಕ ಚಿತ್ರ

ಸಹರಣ್‌ಪುರ: ಉತ್ತರಪ್ರದೇಶದ ಸಹರಣ್‌ಪುರ ಜಿಲ್ಲೆಯ ರೆದಿಬೊಡ್‌ಕಿ ಗ್ರಾಮದ ಸಮೀಪದ ಹೊಳೆಗೆ ಟ್ರಾಕ್ಟರ್ ಟ್ರಾಲಿಯೊಂದು ಬಿದ್ದು ಸಂಭವಿಸಿದ ದುರಂತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬುಧವಾರ ಸಂಜೆ 50 ಮಂದಿಯ ಗುಂಪೊಂದು ಟ್ರಾಕ್ಟರ್‌ನಲ್ಲಿ ರಾಂಡೌಲ್ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆಯೆಂದು ಪೊಲೀಸ್ ಅಧೀಕ್ಷಕ ಅಭಿಮನ್ಯು ಮಾಂಗಲಿಕ್ ತಿಳಿಸಿದ್ದಾರೆ.

ಹೊಳೆಯಲ್ಲಿ ನೀರಿನ ಪ್ರವಾಹ ವೇಗವಾಗಿ ಹರಿಯುತ್ತಿದ್ದುದರಿಂದ ಹಲವಾರು ಮಂದಿ ನೀರುಪಾಲಾಗಿದ್ದರೂ, ದಡ ಸೇರುವಲ್ಲಿ ಸಫಲರಾಗಿದ್ದರು. ಇನ್ನೂ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News