ರೈಲ್ವೆ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಯ: ಮೊದಲ 15 ನಿಮಿಷ ಆಧಾರ್ ದೃಢೀಕರಣ ಕಡ್ಡಾಯ!
ಅಕ್ಟೋಬರ್ 1ರಿಂದ ಜಾರಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2025ರ ಅಕ್ಟೋಬರ್ 1ರಿಂದಲೇ ಭಾರತೀಯ ರೈಲ್ವೆ ಹೊಸ ನೀತಿಯನ್ನು ಜಾರಿಗೆ ತರಲಿದೆ. IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಕಾಯ್ದಿರಿಸಿದ ಸಾಮಾನ್ಯ ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ಮೊದಲ 15 ನಿಮಿಷಗಳಲ್ಲಿ ಆಧಾರ್ ದೃಢೀಕರಣ ಕಡ್ಡಾಯವಾಗಿದೆ.
ಆಧಾರ್ ಆಧಾರಿತ ಈ ದೃಢೀಕರಣ ಕ್ರಮವು ನಿಜವಾದ ಪ್ರಯಾಣಿಕರಿಗೆ ಅವಕಾಶ ಸಿಗುವಂತೆ ಮಾಡುತ್ತದೆ ಮತ್ತು ಅನಧಿಕೃತ ವ್ಯಕ್ತಿಗಳಿಂದ ದುರುಪಯೋಗವನ್ನು ತಡೆಯಲು ಸಹಕಾರಿಯಾಗಲಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತೀಯ ರೈಲ್ವೆಯ ಪ್ರಕಾರ, ಕಂಪ್ಯೂಟರ್ ಪಿಆರ್‌ಎಸ್ ಕೌಂಟರ್‌ಗಳಲ್ಲಿ ಸಾಮಾನ್ಯ ರಿಸರ್ವ್ ಟಿಕೆಟ್‌ಗಳನ್ನು ಕಾಯ್ದಿರಿಸುವ ಸಮಯದಲ್ಲಿ ಬದಲಾವಣೆ ಇಲ್ಲ. ಅಧಿಕೃತ ರೈಲ್ವೆ ಟಿಕೆಟ್ ಬುಕ್ಕಿಂಗ್ ಏಜೆಂಟ್‌ಗಳಿಗೆ ಟಿಕೆಟ್ ಬುಕ್ಕಿಂಗ್‌ಗೆ ಇರುವ 10 ನಿಮಿಷಗಳ ನಿರ್ಬಂಧವೂ ಮುಂದುವರಿಯಲಿದೆ.
ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದ ಕೆಲವೇ ತಿಂಗಳುಗಳ ನಂತರ ಈ ಹೊಸ ನಿಯಮ ಜಾರಿಗೆ ಬಂದಿದೆ ಜುಲೈ 1ರಿಂದ ಭಾರತೀಯ ರೈಲ್ವೆಯ ತತ್ಕಾಲ್ ಅಡಿಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲು ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರತ್ಯೇಕವಾಗಿ ತಮ್ಮ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಬೇಕು.