×
Ad

ಅಹ್ಮದಾಬಾದ್ ವಿಮಾನ ಅಪಘಾತ | ತನಿಖೆಗೆ ನೆರವಾಗಲು ಭಾರತಕ್ಕೆ ಅಮೆರಿಕದ ಎನ್‌ ಟಿ ಎಸ್‌ ಬಿ ತಂಡ

Update: 2025-06-12 22:27 IST

PC : PTI 

ಹೊಸದಿಲ್ಲಿ: ಗುರುವಾರ ಅಹ್ಮದಾಬಾದ್‌ ನಲ್ಲಿ ಏರ್ ಇಂಡಿಯಾ ವಿಮಾನ ಪತನ ಕುರಿತು ತನಿಖೆಯಲ್ಲಿ ದೇಶದ ವಿಮಾನ ಅಪಘಾತ ತನಿಖಾ ಘಟಕಕ್ಕೆ ನೆರವಾಗಲು ಅಮೆರಿಕದ ತನಿಖಾ ಸಂಸ್ಥೆ ನ್ಯಾಷನಲ್ ಟ್ರಾನ್ಸ್‌ಪೋರ್ಟೇಷನ್ ಸೇಫ್ಟಿ ಬೋರ್ಡ್ (ಎನ್‌ ಟಿ ಎಸ್‌ ಬಿ)ನ ತಂಡವೊಂದು ಭಾರತಕ್ಕೆ ಆಗಮಿಸಲಿದೆ ಎಂದು ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಂತರರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆಯ ಅನುಬಂಧ 13ರಡಿ ಅಂತರರಾಷ್ಟ್ರೀಯ ಶಿಷ್ಟಾಚಾರಗಳ ಪ್ರಕಾರ ಭಾರತ ಸರಕಾರವು ತನಿಖೆಯ ಕುರಿತು ಎಲ್ಲ ಮಾಹಿತಿಗಳನ್ನು ಎನ್‌ ಟಿ ಎಸ್‌ ಬಿ ಗೆ ಒದಗಿಸಲಿದೆ.

ಎನ್‌ ಟಿ ಎಸ್‌ ಬಿ ನಾಗರಿಕ ಸಾರಿಗೆ ಅಪಘಾತ ತನಿಖೆಗಳ ಹೊಣೆಯನ್ನು ಹೊಂದಿರುವ ಅಮೆರಿಕ ಸರಕಾರದ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ.

ಅಮೆರಿಕದ ಅತ್ಯುನ್ನತ ವಾಯುಯಾನ ಸಂಸ್ಥೆಯಾಗಿರುವ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ ಎ ಎ) ಕೂಡ ಅಹ್ಮದಾಬಾದ್ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಎನ್‌ ಟಿ ಎಸ್‌ ಬಿ ಜೊತೆ ಸಂಪರ್ಕದಲ್ಲಿದೆ.

ಗಮನಾರ್ಹವಾಗಿ ಅಂತರರಾಷ್ಟ್ರೀಯ ಪರಿಣಾಮಗಳನ್ನು ಹೊಂದಿರುವ ಘಟನೆ ಸಂಭವಿಸಿದಾಗ ಸಂಬಂಧಿಸಿದ ಸರಕಾರವು ತನಿಖೆಯನ್ನು ಮುನ್ನಡೆಸುತ್ತದೆ. ನೆರವು ಕೋರಿದ ಸಂದರ್ಭದಲ್ಲಿ ಎನ್‌ ಟಿ ಎಸ್‌ ಬಿ ಅಧಿಕೃತ ಯುಎಸ್ ಪ್ರತಿನಿಧಿಯಾಗಿರುತ್ತದೆ ಮತ್ತು ಎಫ್‌ ಎ ಎ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News