×
Ad

ಏರ್ ಇಂಡಿಯಾ ವಿಮಾನ ಅಪಘಾತ | ತುಂಬ ದುಃಖವಾಗಿದೆ, ಮಾತುಗಳು ಹೊರಡುತ್ತಿಲ್ಲ: ಆಘಾತ ವ್ಯಕ್ತಪಡಿಸಿದ ಬಾಲಿವುಡ್ ಸೆಲೆಬ್ರಿಟಿಗಳು

Update: 2025-06-12 21:43 IST

PC : PTI 

ಹೊಸದಿಲ್ಲಿ: ಅಹ್ಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದ ಬಗ್ಗೆ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸನ್ನಿ ದೇವಲ್ ಮತ್ತು ರಿತೇಶ್ ದೇಶಮುಖ್ ಮತ್ತಿತರ ಸೆಲೆಬ್ರಿಟಿಗಳು ತೀವ್ರ ಆಘಾತವನ್ನು ವ್ಯಕ್ತಪಡಿಸಿದ್ದಾರೆ.

‘ಆಘಾತವಾಗಿದೆ,ಮಾತುಗಳೇ ಹೊರಡುತ್ತಿಲ್ಲ’ ಎಂದು ಅಕ್ಷಯ ಕುಮಾರ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ವಿಮಾನ ಅಪಘಾತದ ಸುದ್ದಿಯಿಂದ ಆಘಾತಗೊಂಡಿದ್ದೇನೆ ಎಂದು ಟ್ವೀಟಿಸಿರುವ ಸನ್ನಿ ದೇವಲ್,ಈ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಊಹಿಸಲೂ ಸಾಧ್ಯವಿಲ್ಲದಿದ್ದ ಈ ಸಮಯದಲ್ಲಿ ಅವರ ಕುಟುಂಬಗಳು ಧೈರ್ಯ ಕಳೆದುಕೊಳ್ಳದಿರಲಿ ಎಂದು ಹೇಳಿದ್ದಾರೆ.

‘ದುರಂತದ ಸುದ್ದಿಯನ್ನು ಕೇಳಿ ನನ್ನ ಹೃದಯವು ಒಡೆದಿದೆ ಮತ್ತು ತಿವ್ರ ಆಘಾತಗೊಂಡಿದ್ದೇನೆ’ ಎಂದು ಟ್ವಿಟಿಸಿರುವ ರಿತೇಶ್, ‘ಮೃತರು,ಅವರ ಕುಟುಂಬಗಳು ಮತ್ತು ನೆಲದಲ್ಲಿದ್ದು ಪೀಡಿತರಾದ ಎಲ್ಲರಿಗಾಗಿ ನನ್ನ ಹೃದಯವು ಮಿಡಿಯುತ್ತಿದೆ. ಈ ನಂಬಲಾಗದ ಸಂಕಷ್ಟ ಸಮಯದಲ್ಲಿ ನನ್ನ ಆಲೋಚನೆಗಳಲ್ಲಿ ಮತ್ತು ಪಾರ್ಥನೆಗಳಲ್ಲಿ ಅವರಿದ್ದಾರೆ ’ ಎಂದು ಹೇಳಿದ್ದಾರೆ.

ಮೃತರ ಕುಟುಂಬಗಳ ನೋವನ್ನು ಊಹಿಸಲೂ ಸಾಧ್ಯವಿಲ್ಲ,ಈ ಸಂಕಷ್ಟ ಸಮಯದಲ್ಲಿ ನೋವನ್ನು ಭರಿಸುವ ಶಕ್ತಿಯನ್ನು ಅವರಿಗೆ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಪರಿಣೀತಿ ಚೋಪ್ರಾ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ರಣದೀಪ್ ಹೂಡಾ, ಸೋನು ಸೂದ್ ಮತ್ತು ಕಂಗನಾ ರಣಾವತ್ ಅವರು ಎಕ್ಸ್‌ನಲ್ಲಿ ತಮ್ಮ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News