×
Ad

ಬಿಹಾರ: ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಭಾಗಿಯಾದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್

Update: 2025-08-30 15:04 IST

Photo credit: X/@kcvenugopalmp

ಸರಣ್ (ಬಿಹಾರ): ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗಿಯಾದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, “ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದಲ್ಲಿ ಅಖಿಲೇಶ್ ಯಾದವ್ ದೃಢ ಸ್ನೇಹಿತನಾಗಿದ್ದಾರೆ” ಎಂದು ಪ್ರಶಂಸಿಸಿದ್ದಾರೆ.

“ಇಂದು ಬೆಳಗ್ಗೆ ಸರಣ್ ನಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭಾಗಿಯಾದರು. ಪ್ರಜಾಪ್ರಭುತ್ವವನ್ನು ರಕ್ಷಿಸುವ ಈ ಚಾರಿತ್ರಿಕ ಆಂದೋಲನಕ್ಕೆ ಅವರನ್ನು ಸ್ವಾಗತಿಸಲಾಯಿತು. ನಮ್ಮ ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಿರುವ ಬಿಜೆಪಿಯ ವಿರುದ್ಧದ ನಮ್ಮ ಹೋರಾಟದಲ್ಲಿ ಅವರು ದೃಢ ಸ್ನೇಹಿತನಾಗಿದ್ದಾರೆ ಹಾಗೂ ಉತ್ತರ ಪ್ರದೇಶ ಹಾಗೂ ದೇಶಾದ್ಯಂತ ಇರುವ ಬಡ ಹಾಗೂ ಅಂಚಿನ ಸಮುದಾಯಗಳ ಪರವಾದ ಪ್ರಬಲವಾದ ಧ್ವನಿಯಾಗಿದ್ದಾರೆ” ಎಂದು ಅವರು ಶ್ಲಾಘಿಸಿದ್ದಾರೆ.

ಬಿಹಾರದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಅಖಿಲೇಶ್ ಯಾದವ್ ಭೇಟಿ ಮಾಡುತ್ತಿರುವ ಭಾವಚಿತ್ರಗಳನ್ನೂ ಕೆ.ಸಿ.ವೇಣುಗೋಪಾಲ್ ಹಂಚಿಕೊಂಡಿದ್ದಾರೆ. ಈ ವೇಳೆ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಕೂಡಾ ಅಲ್ಲಿರುವುದು ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News