×
Ad

ಭೂ ಅತಿಕ್ರಮಣ ವಿವಾದ | ನಟ ನಾಗಾರ್ಜುನ ಅವರಿಗೆ ಸೇರಿದ ಎನ್ ಕನ್ವೆನ್ಷನ್ ಸೆಂಟರ್ ನೆಲಸಮ

Update: 2024-08-24 13:32 IST

Screengrab:X/ANI

ಹೈದರಾಬಾದ್: ನಟ ನಾಗಾರ್ಜುನ ಒಡೆತನದ ಮಾದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಅಧಿಕಾರಿಗಳ ನಿರ್ದೇಶನದಂತೆ ಕೆಡವುವ ಕಾರ್ಯ ಆರಂಭವಾಗಿದೆ.

ಸ್ಥಳೀಯ ಜಲಾನಯನ ಪ್ರದೇಶವಾದ ತಮ್ಮಿಡಿ ಚೆರುವು ಒತ್ತುವರಿ ಮಾಡಿಕೊಂಡು ಕನ್ವೆನ್ಷನ್ ಸೆಂಟರ್ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ.

ವರದಿಗಳ ಪ್ರಕಾರ, ತಮ್ಮಿಡಿ ಚೆರುವು ಕೆರೆಯ ಭಾಗವಾಗಿದ್ದ ಮೂರೂವರೆ ಎಕರೆ ಭೂಮಿಯನ್ನು ಕನ್ವೆನ್ಷನ್ ಸೆಂಟರ್ ಮಾಲೀಕರು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ ಹೈದ್ರಾ (ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್)ಗೆ ದೂರು ನೀಡಲಾಗಿತ್ತು.

ಅತಿಕ್ರಮಣದ ವ್ಯಾಪ್ತಿಯನ್ನು ಅಧಿಕಾರಿಗಳು ತನಿಖೆ ನಡೆಸಿ, ಅತಿಕ್ರಮಣವಾಗಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಕೆಡವುತ್ತಿದ್ದಾರೆ.

ಟಿಡಿಪಿ ಶಾಸಕರಾಗಿದ್ದಾಗ ಸಿಎಂ ರೇವಂತ್ ರೆಡ್ಡಿ, ವಿಧಾನಸಭೆಯಲ್ಲಿ ಎನ್ ಕನ್ವೆನ್ಷನ್ ಸೆಂಟರ್ ಅತಿಕ್ರಮಣದ ಕುರಿತು ಉಲ್ಲೇಖಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News