×
Ad

ರಾಮಮಂದಿರ ಉದ್ಘಾಟನೆಗೆ ಆಲಿಯಾ-ರಣಬೀರ್ ದಂಪತಿಗೆ ಆಹ್ವಾನ: ಬಲಪಂಥೀಯರಲ್ಲಿ ಅಸಮಾಧಾನ

Update: 2024-01-08 17:59 IST

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ | Photo: ANI 

ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ಬಾಲಿವುಡ್ ದಂಪತಿಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರಿಗೆ ಅಧಿಕೃತವಾಗಿ ಆಹ್ವಾನ ಪತ್ರ ನೀಡಿರುವುದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ.

ರಣಬೀರ್ ಕಪೂರ್ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಬೀಫ್ ತಿನ್ನುವ ಬಗ್ಗೆ ಒಪ್ಪಿಕೊಂಡಿದ್ದರು. ಕಪೂರ್ ಅವರ 'ಬ್ರಹ್ಮಾಸ್ತ್ರ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಬಲಪಂಥೀಯರು ಇದೇ ವಿಚಾರವನ್ನು ಇಟ್ಟುಕೊಂಡು ಬಹಿಷ್ಕಾರಕ್ಕೆ ಅಭಿಯಾನ ಮಾಡಿದ್ದರು.

ಆದರೆ, ಇದೀಗ, ರಾಮಮಂದಿರ ಉದ್ಘಾಟನೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಧಿಕಾರಿಗಳು ಕಪೂರ್-ಭಟ್ ರಿಗೆ ಆಹ್ವಾನ ನೀಡಿರುವುದು ಬಲಪಂಥೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ರಣಬೀರ್ ಕಪೂರ್ ಮತ್ತು ಪತ್ನಿ ಆಲಿಯಾ ಭಟ್ ಅವರನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸುವ ನಿರ್ಧಾರವನ್ನು ಪ್ರಶ್ನಿಸಿದ ಕೆಲವು ಟೀಕಾಕಾರರು, ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಅವರ "ಹಿಂದೂ ವಿರೋಧಿ" ನಿಲುವನ್ನು ಉಲ್ಲೇಖಿಸಿದ್ದಾರೆ. .

ನಿರ್ಮಾಪಕ ಮಹಾವೀರ್ ಜೈನ್ ಅವರ ಹೇಳಿಕೆಯ ಪ್ರಕಾರ, ಇಬ್ಬರೂ ನಟರು ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News