×
Ad

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಟ್ಯೂಶನ್ ಶಿಕ್ಷಕನ ಬಂಧನ

Update: 2024-08-24 20:32 IST

   ಸಾಂದರ್ಭಿಕ ಚಿತ್ರ 

ರಾಮಪುರ (ಉತ್ತರ ಪ್ರದೇಶ): ಏಳು ವರ್ಷದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಟ್ಯೂಶನ್ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಗಂಜ್‌ಪೊಲೀಸ್‌ ಠಾಣೆಯಲ್ಲಿ ನೀಡಲಾದ ದೂರನ್ನು ಆಧರಿಸಿ ಶುಕ್ರವಾರ ರಾತ್ರಿ ಟ್ಯೂಶನ್ ಶಿಕ್ಷಕನ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗಂಜ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ರಾಮಪುರ ಕೋತ್ವಾಲಿ ನಿವಾಸಿ ಸೈಯದ್ ವಾಸಿಕ್ ಅಲಿ ಎಂಬಾತನನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಶುಕ್ರವಾರ ಸಂಜೆ ಆರೋಪಿಯು, ಬಾಲಕಿಗೆ ಪಾಠ ಹೇಳಿಕೊಡಲು ಬಂದಿದ್ದ ಸಮಯದಲ್ಲಿ ಆರೋಪಿಯು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು ಎಂದು ಆಕೆಯ ಕುಟಂಬಪಿರು ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News