ಆಂಧ್ರಪ್ರದೇಶ | ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ, ಭಕ್ತನ ಆರೋಪ ನಿರಾಕರಿಸಿದ ದೇವಳದ ಅಧಿಕಾರಿ
Photo Courtesy: X/@teluguscribe
ಹೊಸದಿಲ್ಲಿ: ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದಲ್ಲಿ ರವಿವಾರ ವಿತರಿಸಲಾದ ‘ಲಡ್ಡು’ ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಭಕ್ತರೋರ್ವರು ಹೇಳಿಕೊಂಡಿದ್ದು, ಇದು ತೀವ್ರ ಆಕ್ರೋಶವನ್ನು ಸೃಷ್ಟಿಸಿದೆ. ಶರಶ್ಚಂದ್ರ ಕೆ.ಎನ್ನುವವರು ಲಡ್ಡು ನಡುವೆ ಸತ್ತ ಜಿರಳೆ ಇರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಆರೋಪವನ್ನು ನಿರಾಕರಿಸಿದ್ದಾರೆ.
శ్రీశైలం లడ్డు ప్రసాదంలో బొద్దింక కలకలం
— Telugu Scribe (@TeluguScribe) June 29, 2025
ప్రసాదాల కౌంటర్ వద్ద భక్తుల ఆందోళన
ఇదేంటని ప్రశ్నించిన భక్తుడి నుంచి లడ్డు లాక్కున్న అధికారులు
ప్రసాదంలో బొద్దింక వ్యవహారంపై స్పందించిన ఆలయ ఈవో శ్రీనివాసరావు
ఈ ఘటన నిజంగా జరిగిందా లేదా ఎవరైనా కావాలనే దుష్ప్రచారం చేస్తున్నారనే దానిపై… pic.twitter.com/w5Ku6bwwbw
ಜಿರಳೆ ಪತ್ತೆಯಾದ ತಕ್ಷಣ ಶರಶ್ಚಂದ್ರ ಅವರು ಕಾರ್ಯ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದು, ದೇವಸ್ಥಾನದ ಸಿಬ್ಬಂದಿ ಲಡ್ಡು ತಯಾರಿಕೆಯಲ್ಲಿ ಎಚ್ಚರಿಕೆ ವಹಿಸಿರಲಿಲ್ಲ ಎಂದು ಹೇಳಿದ್ದಾರೆ.
‘ಜೂ.29ರಂದು ನಾನು ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ನನಗೆ ನೀಡಲಾಗಿದ್ದ ಲಡ್ಡು ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿದೆ. ಪ್ರಸಾದವನ್ನು ತಯಾರಿಸುವಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ. ದಯವಿಟ್ಟು ಇದನ್ನು ಗಮನಿಸಿ ಮತ್ತು ಸಮಸ್ಯೆಯನ್ನು ಬಗೆಹರಿಸಿ’ ಎಂದು ಶರಶ್ಚಂದ್ರ ದೂರಿನಲ್ಲಿ ಕೋರಿದ್ದಾರೆ.
ಆದರೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ ರಾವ್ ಇದನ್ನು ನಿರಾಕರಿಸಿದ್ದಾರೆ.
ಸಿಬ್ಬಂದಿಗಳ ನಿರಂತರ ಮೇಲ್ವಿಚಾರಣೆಯಡಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಂಡು ಲಡ್ಡುಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿ ಜಿರಳೆ ಸಿಗುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು.
ಪ್ರಸಾದದ ಬಗ್ಗೆ ಚಿಂತೆ ಬೇಡ ಎಂದು ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.