ಜಾಧವ್‌ಪುರ ವಿ.ವಿ.ಯ ಇನ್ನೋರ್ವ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ
Update: 2023-08-21 21:07 IST
Swapnodeep Kundu
ಕೋಲ್ಕತಾ: ಪಶ್ಚಿಮಬಂಗಾಳದ ಜಾಧವ್‌ಪುರ ವಿಶ್ವವಿದ್ಯಾನಿಲಯದ ಇನ್ನೋರ್ವ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಮೊದಲ ವರ್ಷದ ಪದವಿ ವಿದ್ಯಾರ್ಥಿ ಸ್ವಪ್ನದ್ವೀಪ್ ಕುಂಡು ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ನೀಡುತ್ತಿರುವ ಕಿರುಕುಳವೇ ತಾನು ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣ ಎಂದು ಆತ ಆರೋಪಿಸಿದ್ದಾನೆ.
ಮೃತಪಟ್ಟ ವಿದ್ಯಾರ್ಥಿಯ ರ‍್ಯಾಗಿಂಗ್‌ಗೆ ಸಂಬಂಧಿಸಿದ ಯಾವುದಾದರೂ ಎಲೆಕ್ಟ್ರಾನಿಕ್ಸ್ ಪುರಾವೆ ಪಡೆಯಲು ವಿಧಿ ವಿಜ್ಞಾನ ಪರೀಕ್ಷೆಗೆ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡ ಬಳಿಕ ಭೀತನಾದ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಭೀತನಾದ ವಿದ್ಯಾರ್ಥಿಗೆ ವಿಶ್ವವಿದ್ಯಾನಿಲಯ ಸಮಾಲೋಚನೆ ನಡೆಸಿದೆ.