×
Ad

ರೀಲ್ಸ್‌ ವ್ಯಾಮೋಹಕ್ಕೆ ಮತ್ತೊಂದು ಬಲಿ: 14 ವರ್ಷದ ಬಾಲಕನಿಗೆ ರೈಲು ಡಿಕ್ಕಿ

Update: 2023-10-01 21:35 IST

Photo : twitter

ಲಕ್ನೋ: ರೀಲ್ಸ್ ವ್ಯಾಮೋಹಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ 14 ವರ್ಷದ ಬಾಲಕನೊಬ್ಬನಿಗೆ ರೈಲು ಡಿಕ್ಕಿ ಹೊಡೆದಿದೆ. 

ರೀಲ್ಸ್‌ ಮಾಡುವ ಸಲುವಾಗಿ ಹಳಿಯ ಬಳಿಗೆ ಹೋದ 14 ವರ್ಷದ ಫರ್ಮಾನ್ ಅಜಾಗರೂಕತೆಯಿಂದ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲು ಆತನಿಗೆ ಬಲವಾಗಿ ಗುದ್ದಿದೆ. 

ಮೃತ ಬಾಲಕನನ್ನು ಉತ್ತರ ಪ್ರದೇಶದ ಜಹಾಂಗೀರಾಬಾದ್‌ನ ತೇರಾ ದೌಲತ್‌ಪುರ ನಿವಾಸಿ ಮುನ್ನಾ ಅವರ ಮಗ ಫರ್ಮಾನ್‌ ಎಂದು ಗುರುತಿಸಲಾಗಿದೆ. ಫರ್ಮಾನ್ ತನ್ನ ಸ್ನೇಹಿತರಾದ ಶುಐಬ್, ನಾದಿರ್ ಮತ್ತು ಸಮೀರ್ ಜೊತೆಗೂಡಿ ಮೀಲಾದ್‌ ರ್ಯಾಲಿ ನೋಡಲು ಹೋಗಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. 

ಈ ನಡುವೆ, ಗೆಳೆಯರು ರೀಲ್ಸ್‌ ತಯಾರಿಸಲು ಮುಂದಾಗಿದ್ದು, ಅದರಂತೆ, ರೈಲು ಹಳಿಗಳ ಮೇಲೆ ಫರ್ಮಾನ್ ನಡೆದುಕೊಂಡು ಹೋಗುತ್ತಿದ್ದಾಗ ಕೆಲವೇ ಸೆಕೆಂಡ್ ನಲ್ಲಿ ರೈಲೊಂದು ಬಂದಿದ್ದು, ಆತನಿಗೆ ಢಿಕ್ಕಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News