×
Ad

ವಾಷಿಂಗ್ ಮೆಷಿನ್ ನಲ್ಲಿ ಮೂರು ವರ್ಷದ ಬಾಲಕನ ಮೃತದೇಹ ಪತ್ತೆ; ಮಹಿಳೆಯ ಬಂಧನ

Update: 2024-09-10 15:11 IST

ಸಂಜಯ್ | PC : newindianexpress.com

ತಮಿಳುನಾಡು: ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ಪ್ರದೇಶದಲ್ಲಿ ವಾಷಿಂಗ್ ಮೆಷಿನ್ನಲ್ಲಿ ಮೂರು ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ಮಹಿಳೆಯನ್ನು ಬಂಧಿಸಲಾಗಿದೆ.

indianexpress.com ವರದಿಯ ಪ್ರಕಾರ, ಸಂಜಯ್ ಎಂಬ ಬಾಲಕನ ಮೃತದೇಹ ವಾಷಿಂಗ್ ಮೆಷಿನ್ ನಲ್ಲಿ ಪತ್ತೆಯಾಗಿದೆ. ಬಾಲಕನನ್ನು ಕೊಲೆ ಮಾಡಿ ಮೃತದೇಹವನ್ನು ವಾಷಿಂಗ್ ಮೆಷಿನ್ ನಲ್ಲಿ ಮರೆಮಾಡಿದ ಆರೋಪದ ಮೇಲೆ 40 ವರ್ಷದ ಮಹಿಳೆಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಗನವಾಡಿಗೆ ತೆರಳುವ ಮುನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ಸೋಮವಾರ ನಾಪತ್ತೆಯಾಗಿದ್ದ. ನಮ್ಮ ನೆರೆಯ ಮನೆಯವರ ಜೊತೆ ತಕರಾರಿದ್ದು ಅವರ ಮನೆಯಲ್ಲಿ ಹುಡುಕಾಟ ನಡೆಸುವಂತೆ ಪೊಲೀಸರಿಗೆ ಬಾಲಕನ ಪೋಷಕರು ಆಗ್ರಹಿಸಿದ್ದಾರೆ. ಇದರಂತೆ ಹುಡಕಾಟವನ್ನು ನಡೆಸಿದಾಗ ಪಕ್ಕದ ಮನೆಯ ವಾಷಿಂಗ್ ಮೆಷಿನ್ ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ಮತ್ತು ಮೃತ ಬಾಲಕನ ಕುಟುಂಬದ ನಡುವೆ ಜಮೀನಿಗೆ ಸಂಬಂಧಿಸಿದ ವಿವಾದವಿತ್ತು. ಆರೋಪಿ ಮಹಿಳೆಯ ಮಗ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಆ ಬಳಿಕ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News