×
Ad

ಬಿಲ್ಕಿಸ್‌ ಬಾನು ಪ್ರಕರಣ: ಗೋಧ್ರಾ ಉಪ ಕಾರಾಗೃಹದಲ್ಲಿ ಶರಣಾದ ಎಲ್ಲಾ 11 ದೋಷಿಗಳು

Update: 2024-01-22 10:13 IST

Photo: PTI

ಅಹ್ಮದಾಬಾದ್: ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಮಂದಿ ದೋಷಿಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ರವಿವಾರ ರಾತ್ರಿ ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ ಉಪ ಕಾರಾಗೃಹದಲ್ಲಿ ಶರಣಾಗಿದ್ದಾರೆ.

“ಶನಿವಾರ ತಡ ರಾತ್ರಿ ಎಲ್ಲಾ 11 ದೋಷಿಗಳು ಶರಣಾಗಿದ್ದಾರೆ. ಸುಪ್ರೀಂ ಕೋರ್ಟ್‌ ವಿಧಿಸಿದ ಗಡುವಿನಂತೆ ಜನವರಿ 21ರ ಮಧ್ಯರಾತ್ರಿಗೆ ಮುಂಚಿತವಾಗಿ ಎಲ್ಲರೂ ಶರಣಾಗಿದ್ದಾರೆ,” ಎಂದು ಕ್ರೈಂ ಬ್ರ್ಯಾಂಚ್‌ ಇನ್‌ಸ್ಪೆಕ್ಟರ್‌ ಎನ್‌ ಎಲ್‌ ದೇಸಾಯಿ ಹೇಳಿದ್ದಾರೆ.

ಕಳೆದ ವಾರ ದೋಷಿಗಳು ತಮಗೆ ಶರಣಾಗಲು ಹೆಚ್ಚಿನ ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತಲ್ಲದೆ ರವಿವಾರದೊಳಗೆ ಶರಣಾಗುವಂತೆ ಅವರಿಗೆ ಸೂಚಿಸಿತ್ತು.

ಈ 11 ದೋಷಿಗಳನ್ನು ಬಿಡುಗಡೆಗೊಳಿಸಿ ಗುಜರಾತ್‌ ಸರ್ಕಾರ ಹೊರಡಿಸಿದ್ದ ಆಗಸ್ಟ್‌ 2022 ಆದೇಶವನ್ನು ಸುಪ್ರೀಂ ಕೋರ್ಟ್‌ ಜನವರಿ 8ರ ತೀರ್ಪಿನಲ್ಲಿ ರದ್ದುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News