×
Ad

ಗುಜರಾತ್ | ಬಿಜೆಪಿ ಕೌನ್ಸಿಲರ್‌ನಿಂದ ವಿವಾಹಿತ ಮಹಿಳೆಯ ಅತ್ಯಾಚಾರ ; ಆರೋಪ

Update: 2024-11-18 22:53 IST

ದೀಪು ಗೋರ್ಧನ್ಭಾಯ್ ಪ್ರಜಾಪತಿ | PC : newindianexpress 

ಅಹ್ಮದಾಬಾದ್ : ವೋಟರ್ ಸ್ಲಿಪ್ ನೀಡುವ ನೆಪದಲ್ಲಿ ವಿವಾಹಿತ ಮಹಿಳೆಯ ಮೊಬೈಲ್ ನಂಬರ್ ಪಡೆದ ಬಿಜೆಪಿಯ ಕೌನ್ಸಿಲರ್ , ನಂತರ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ನ ಆನಂದ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಯನ್ನು ಮುನ್ಸಿಪಾಲಿಟಿಯ ವಾರ್ಡ್ ನಂ. 6ರ ಬಿಜೆಪಿ ಕೌನ್ಸಿಲರ್ ದೀಪು ಗೋರ್ಧನ್ಭಾಯ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವೋಟರ್ ಸ್ಲಿಪ್ ನೀಡುವ ನೆಪದಲ್ಲಿ ಆರು ತಿಂಗಳ ಹಿಂದೆ ಅರೋಪಿ ಪ್ರಜಾಪತಿ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ನಂತರ ಫೋನ್ ಸಂಭಾಷಣೆಗಳ ರೆಕಾರ್ಡಿಂಗ್ ಇಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

ಪೊಲೀಸರು ಆತನ ಸಹಚರರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರಲ್ಲಿ ಕೆಲವರು ಸಂತ್ರಸ್ತೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಧ್ಯರಾತ್ರಿಯ ಹೊತ್ತಿನಲ್ಲಿ ಪ್ರಜಾಪತಿಯು, ಮಹಿಳೆಯ ಮನೆಗೆ ತೆರಳಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

ಪತಿ ಮತ್ತು ಮಕ್ಕಳ ಬಗ್ಗೆಗಿನ ಭೀತಿಯಿಂದ ಮಹಿಳೆ ಆರಂಭದಲ್ಲಿ ಘಟನೆಯ ಬಗ್ಗೆ ಮೌನವಾಗಿದ್ದರು ಎನ್ನಲಾಗಿದೆ. ಪತಿಗೆ ರೆಡ್‌ ಹ್ಯಾಂಡ್ ಗಲಾಟೆಗೆ ಕಾರಣವಾಗಿತ್ತು. ಈ ವೇಳೆ ನೆರೆಹೊರೆಯವರು ಸ್ಥಳಕ್ಕಾಗಮಿಸಿದ್ದರು. ನಂತರ ಪ್ರಜಾಪತಿಯ ಸಹೋದರರು ಮತ್ತು ಸಹಚರರು ಕೋಲು ಮತ್ತು ಪೈಪ್ಗಳಿಂದ ಸಂತ್ರಸ್ತೆಯ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News