×
Ad

ಲೋಕಸಭಾ ಚುನಾವಣೆಗೆ ಮುನ್ನ ರಾಜಿನಾಮೆ ಸಲ್ಲಿಸಿದ ಬಿಜೆಪಿ ಶಾಸಕ

Update: 2024-03-19 12:49 IST

ಕೇತನ್ ಇನಾಮದಾರ್ | Photo: X \ @GauravSavad

ವಡೋದರಾ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮುನ್ನ, ಗುಜರಾತ್ ನ ಬಿಜೆಪಿ ಶಾಸಕ ಕೇತನ್ ಇನಾಮದಾರ್ ಮಂಗಳವಾರ ರಾಜ್ಯ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ವಡೋದರ ಜಿಲ್ಲೆಯ ಸಾವ್ಲಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಇನಾಮದಾರ್ ಅವರು ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಸಲ್ಲಿಸಿದರು.

ತಮ್ಮ ʼಒಳಗಿನ ಧ್ವನಿʼ ಆಲಿಸಿದ ನಂತರ ರಾಜೀನಾಮೆ ನೀಡುತ್ತಿರುವುದಾಗಿ ಇನಾಮದಾರ್ ಅವರು ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಇನಾಮದಾರ್ 2012ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆದ್ದಿದ್ದರು. ನಂತರ ಬಿಜೆಪಿ ಸೇರಿ 2017 ಮತ್ತು 2022ರಲ್ಲಿ ಎರಡು ಬಾರಿ ಗೆದ್ದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News