×
Ad

ಭಾರತದಲ್ಲಿ ಪಾಕ್‌ ಕಲಾವಿದರನ್ನು ನಿಷೇಧಿಸಬೇಕೆಂದು ಕೋರಿದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್‌

ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ಪ್ರದರ್ಶನ ನೀಡುವುದರಿಂದ ಅಥವಾ ಕೆಲಸ ಮಾಡುವುದರಿಂದ ಸಂಪೂರ್ಣ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ. ದೇಶಭಕ್ತರಾಗಬೇಕೆಂದರೆ ಬೇರೆ ದೇಶದವರೊಂದಿಗೆ, ಪ್ರಮುಖವಾಗಿ ನೆರೆಯ ರಾಷ್ಟ್ರದವರೊಂದಿಗೆ ದ್ವೇಷದ ಭಾವನೆ ಹೊಂದಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ

Update: 2023-10-23 18:09 IST

PHOTO : instagram

ಮುಂಬೈ: ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ಪ್ರದರ್ಶನ ನೀಡುವುದರಿಂದ ಅಥವಾ ಕೆಲಸ ಮಾಡುವುದರಿಂದ ಸಂಪೂರ್ಣ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ. ದೇಶಭಕ್ತರಾಗಬೇಕೆಂದರೆ ಬೇರೆ ದೇಶದವರೊಂದಿಗೆ, ಪ್ರಮುಖವಾಗಿ ನೆರೆಯ ರಾಷ್ಟ್ರದವರೊಂದಿಗೆ ದ್ವೇಷದ ಭಾವನೆ ಹೊಂದಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ  ಎಂದು indiatoday.com ವರದಿ ಮಾಡಿದೆ.

ದೇಶದಲ್ಲಿ ಶಾಂತಿ, ಸಾಮರಸ್ಯವನ್ನು ಪ್ರೋತ್ಸಾಹಿಸುವ ಯಾವುದೇ ಚಟುವಟಿಕೆಯನ್ನು ಒಳ್ಳೆಯ ವ್ಯಕ್ತಿ ಸ್ವಾಗತಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಚಿತ್ರ ಕಲಾವಿದ ಎಂದು ಹೇಳಿಕೊಳ್ಳುವ ಫಾಯಿಝ್‌ ಅನ್ವರ್‌ ಖುರೇಷಿ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸುನೀಲ್ ಶುಕ್ರೆ ಮತ್ತು ಫಿರ್ದೋಶ್‌ ಪೂನಿವಾಲ ಅವರ ಪೀಠ ವಜಾಗೊಳಿಸಿದೆ.

ಪಾಕಿಸ್ತಾನದ ಕಲಾವಿದರು ಅಲ್ಲಿನ ಸಿನೆಮಾ ಕಲಾವಿದರು, ಗಾಯಕರು, ತಂತ್ರಜ್ಞರ ಸೇವೆಯನ್ನು ಪಡೆಯುವುದರಿಂದ ಭಾರತದ ನಾಗರಿಕರು, ಕಂಪನಿಗಳು ಹಾಗೂ ಸಂಘಸಂಸ್ಥೆಗಳನ್ನು ನಿರ್ಬಂಧಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

ಸಾಂಸ್ಕೃತಿಕ ಸಾಮರಸ್ಯ, ಏಕತೆ ಮತ್ತು ಶಾಂತಿಯ ನಿಟ್ಟಿನಲ್ಲಿ ಇದು ಪುರೋಗಾಮಿ ಕ್ರಮವಾಗುತ್ತದೆ ಎಂದು ಈ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ.

ಪಾಕಿಸ್ತಾನದ ಕ್ರಿಕೆಟ್‌ ತಂಡ ಕೂಡ ಭಾರತಕ್ಕೆ ಆಗಮಿಸಿ ಇಲ್ಲಿ ಕ್ರಿಕೆಟ್‌ ಆಡುತ್ತಿರುವುದು ಸರಕಾರದ ಸಕಾರಾತ್ಮಕ ಧೋರಣೆಯಿಂದ ಸಾಧ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪಾಕಿಸ್ತಾನ ತಂಡ ವಿಶ್ವ ಕಪ್‌ನಲ್ಲಿ ಆಡಲು ಭಾರತಕ್ಕೆ ಬಂದಿದೆ ಎಂದು ಅದನ್ನೇ ನೆಪವಾಗಿಸಿ ಪಾಕಿಸ್ತಾನಿ ಗಾಯಕರು ಮತ್ತು ಕಲಾವಿದರನ್ನು ಆಹ್ವಾನಿಸಿದರೆ ಅದು ಸ್ಥಳೀಯ ಕಲಾವಿದರ ಅವಕಾಶಗಳನ್ನು ಕಡಿಮೆಗೊಳಿಸಬಹುದು ಎಂದೂ ಅರ್ಜಿದಾರರು ವಾದಿಸಿದ್ದರು.

ಆದರೆ ಈ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿ ಅರ್ಜಿಯನ್ನು ವಜಾಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News