×
Ad

ಕೇರಳ | ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿನಲ್ಲಿ ಅಗ್ನಿ ಅವಘಡ; ನೌಕಾಪಡೆಯಿಂದ ರಕ್ಷಣಾ ಕಾರ್ಯಾಚರಣೆ

Update: 2025-06-09 14:04 IST

Photo credit: indiatoday.in

ತಿರುವನಂತಪುರ : ಕೇರಳದ ಬೇಪೋರ್ ಕರಾವಳಿಯಲ್ಲಿ ಸಿಂಗಾಪುರದ ಧ್ವಜವನ್ನು ಹೊಂದಿದ್ದ ಸರಕು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ʼಸೋಮವಾರ ಬೆಳಗಿನ ಜಾವ ಬೇಪೋರ್ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬೆಂಕಿ ಕಾಣಿಸಿಕೊಂಡ ಸರಕು ಹಡಗಿನಿಂದ ಸುಮಾರು 22 ಸಿಬ್ಬಂದಿಯನ್ನು ರಕ್ಷಿಸಲು ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು thehindu ವರದಿ ತಿಳಿಸಿದೆ.

ಹಡಗು 650ಕ್ಕೂ ಅಧಿಕ ಕಂಟೇನರ್‌ಗಳೊಂದಿಗೆ ಕೊಲಂಬೊದಿಂದ ಮುಂಬೈಗೆ ತೆರಳುತ್ತಿತ್ತು ಎಂದು ಕೋಸ್ಟ್ ಗಾರ್ಡ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News