×
Ad

48 ಗಂಟೆಗಳ ಗಡುವು ನೀಡಿದ ಕೇಂದ್ರ ಸರಕಾರ | ಸ್ವದೇಶಕ್ಕೆ ವಾಪಸಾತಿ ಆರಂಭಿಸಿದ ಪಾಕಿಸ್ತಾನೀಯರು

Update: 2025-04-24 20:36 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಭಾರತದಿಂದ ತೆರಳಲು ಕೇಂದ್ರ ಸರಕಾರವು 48 ಗಂಟೆಗಳ ಗಡುವು ನೀಡಿದ ಬಳಿಕ, ಪಾಕಿಸ್ತಾನೀಯರು ತಮ್ಮ ಸ್ವದೇಶ ಯಾನವನ್ನು ಗುರುವಾರ ಆರಂಭಿಸಿದ್ದಾರೆ. ಗಡುವು ಘೋಷಣೆಯ ಒಂದು ದಿನದ ಬಳಿಕ, ಪಾಕಿಸ್ತಾನೀಯರು ಅಮೃತಸರದಲ್ಲಿರುವ ಅಟ್ಟಾರಿ-ವಾಘಾ ಗಡಿಯ ಮೂಲಕ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ.

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ ಭೀಕರ ಹತ್ಯಾಕಾಂಡದ ಬಳಿಕ, ಕೇಂದ್ರ ಸರಕಾರವು ಬುಧವಾರ ಪಾಕಿಸ್ತಾನೀಯರಿಗೆ ಭಾರತ ತೊರೆಯಲು 48 ಗಂಟೆಗಳ ಗಡುವು ನೀಡಿತ್ತು. ಭಯೋತ್ಪಾದಕರ ದಾಳಿಯಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ.

ಗುರುವಾರ ಬೆಳಗ್ಗೆ, ಹಲವಾರು ಪಾಕಿಸ್ತಾನಿ ಕುಟುಂಬಗಳು ಅಟ್ಟಾರಿ-ವಾಘಾ ಭೂ ಮಾರ್ಗದ ಮೂಲಕ ಸ್ವದೇಶಕ್ಕೆ ವಾಪಸಾಗುವುದಕ್ಕಾಗಿ ಅಮೃತಸರದಲ್ಲಿರುವ ಇಂಟಗ್ರೇಟಡ್ ಚೆಕ್ ಪೋಸ್ಟ್ (ಐಸಿಪಿ)ಗೆ ಆಗಮಿಸಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News