×
Ad

ತ್ರಿವಳಿ ತಲಾಖ್‌ ನಿಷೇಧ ಕಾನೂನನ್ನು ಸುಪ್ರೀಂ ಕೋರ್ಟಿನಲ್ಲಿ ಸಮರ್ಥಿಸಿದ ಕೇಂದ್ರ ಸರಕಾರ

Update: 2024-08-19 16:25 IST

ಹೊಸದಿಲ್ಲಿ: ತ್ರಿವಳಿ ತಲಾಖ್‌ ಕಾನೂನನ್ನು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ, ತ್ರಿವಳಿ ತಲಾಖ್‌ ಪದ್ಧತಿಯು ಮುಸ್ಲಿಂ ಮಹಿಳೆಯನ್ನು ಆಕೆಯ ಪತಿ ತ್ಯಜಿಸುವುದನ್ನು ಕಾನೂನುಬದ್ಧಗೊಳಿಸಿದ್ದರಿಂದ ಅದರ ನಿಷೇಧವು ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಲಿಂಗ ಸಮಾನತೆ ಮತ್ತು ಲಿಂಗ ನ್ಯಾಯ ಒದಗಿಸುವ ವಿಸ್ತೃತ ಸಂವಿಧಾನಿಕ ಗುರಿಗಳನ್ನು ಈಡೇರಿಸುವಲ್ಲಿ ಸಹಾಯ ಮಾಡಿದೆ ಎಂದು ಹೇಳಿದೆ.

ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯಿದೆ 2019 ಅನ್ನು ಅಸಂವಿಧಾನಿಕ ಮತ್ತು ಸಂವಿಧಾನದ ವಿಧಿ 14, 15, 21 ಮತ್ತು 123 ಅನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸಬೇಕೆಂದು ಕೋರಿ ಸಮಸ್ತ ಕೇರಳ ಜಮೀಯತುಲ್‌ ಉಲೆಮಾ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಮೇಲಿನಂತೆ ಹೇಳಿದೆ.

“ತ್ರಿವಳಿ ತಲಾಖ್‌ ಪದ್ಧತಿ ವೈಯಕ್ತಿಕ ನೋವು ನೀಡುವವ ಹೊರತಾಗಿ ಸಾರ್ವಜನಿಕವಾಗಿಯೂ ತಪ್ಪಾಗಿದೆ ಏಕೆಂದರೆ ಅದು ಮಹಿಳೆಯರ ಹಕ್ಕುಗಳನ್ನು ಮತ್ತು ವಿವಾಹ ಎಂಬ ಸಾಮಾಜಿಕ ಸಂಸ್ಥೆಯನ್ನೇ ದಮನಿಸುತ್ತದೆ,” ಎಂದು ಕೇಂದ್ರ ತನ್ನ ಅಫಿಡಿವಟ್‌ನಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News