×
Ad

ಚತ್ತೀಸ್ ಗಢ | ಐವರು ನಕ್ಸಲರ ಬಂಧನ

Update: 2024-07-07 22:51 IST

Image Source : FREEPIK

ಸುಕ್ಮಾ :ಚತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸರು ಐವರು ನಕ್ಸಲರನ್ನು ಬಂಧಿಸಿದ್ದು, ಅವರಿಂದ ಎರಡು ಬ್ಯಾರಲ್ ಗ್ರೆನೇಡ್ ಲಾಂಚರ್ ಶೆಲ್ ಗಳು ಹಾಗೂ ಒಂದು ಟಿಫಿನ್ ಬಾಂಬ್ ಸೇರಿದಂತೆ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಬಂಧಿತರನ್ನು ಹೇಮ್ಲಾ ಪಾಲಾ (35), ಹೆಮ್ಲಾ ಹುಂಗಾ (35), ಸೋಡಿ ದೇವಾ (25), ನುಪ್ಪೊ (20) ಹಾಗೂ ಕುಂಜಮ್ ಮಾಸಾ (28) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸೂರ್ಪನ್ಗುಡಾ ಪ್ರದೇಶದಲ್ಲಿ ಸಕ್ರಿಯವಾಗಿರುವ ನಕ್ಸಲ್ ಗುಂಪಿನ ಸದಸ್ಯರಾಗಿದ್ದಾರೆ.

ಜಾಗರ್ಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾ ಮೀಸಲು ಕಾವಲು ದಳ (ಡಿಆರ್ಜಿ), ಬಸ್ತಾರ್ ಫೈಟರ್ಸ್ ಹಾಗೂ ಜಿಲ್ಲಾ ಪಡೆಯನ್ನು ಒಳಗೊಂಡ ಜಂಟಿ ತಂಡವೊಂದು ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News