×
Ad

ಛತ್ತೀಸ್ ಗಢ| ಇಬ್ಬರು ಮಹಿಳೆಯರ ಸಹಿತ 6 ಮಂದಿ ನಕ್ಸಲರು ಎನ್ ಕೌಂಟರ್ ನಲ್ಲಿ ಮೃತ್ಯು

Update: 2024-03-27 15:18 IST

Photo: PTI 

ಬಿಜಾಪುರ್ (ಛತ್ತೀಸ್ ಗಢ): ಭದ್ರತಾ ಸಿಬ್ಬಂದಿಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಮಹಿಳಾ ಕೇಡರ್ ಗಳು ಸೇರಿದಂತೆ ಒಟ್ಟು ಆರು ಮಂದಿ ನಕ್ಸಲರು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ಭದ್ರತಾ ಸಿಬ್ಬಂದಿಗಳ ಭದ್ರತಾ ಪಡೆಯು ತೆರಳಿದ್ದಾಗ ಬಸಾಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಚಿಪುರ್ ಭಟ್ಟಿ ಗ್ರಾಮದ ಬಳಿಯ ತಲ್ಪೇರು ನದಿಯ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಮಹಾ ನಿರೀಕ್ಷಕ (ಬಸ್ತಾರ್ ವಲಯ) ಸುಂದರ್ ರಾಜ್ ಪಿ. PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೃತಪಟ್ಟ ನಕ್ಸಲರನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಇನ್ನೂ ಹಲವಾರು ನಕ್ಸಲರು ಗಾಯಗೊಂಡಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಬಿಜಾಪುರ್ ಜಿಲ್ಲೆ ಬಸ್ತಾರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಎಪ್ರಿಲ್ 19ರಿಂದ ಪ್ರಾರಂಭವಾಗಲಿರುವ ಮೊದಲ ಹಂತದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲೂ ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News