×
Ad

ಜಮ್ಮುಕಾಶ್ಮೀರ | ಬುಡಕಟ್ಟು ಸಮುದಾಯದ ಯುವಕನ ಹತ್ಯೆ : ಇಬ್ಬರು ಪೊಲೀಸರ ಅಮಾನತು, ಎಸ್ಐಟಿ ರಚನೆ

Update: 2025-07-26 20:21 IST

Photo | NDTV

ಶ್ರೀನಗರ: ಜಮ್ಮುಕಾಶ್ಮೀರದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬುಡಕಟ್ಟು ಸಮುದಾಯದ ಯುವಕ ಮೃತಪಟ್ಟಿದ್ದು, ವ್ಯಾಪಕ ಆಕ್ರೋಶದ ಬಳಿಕ ಈ ಕುರಿತ ತನಿಖೆಗೆ ಎಸ್ಐಟಿ ರಚಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಮುಹಮ್ಮದ್ ಪರ್ವಾಝ್ ಹತ್ಯೆಯು ಜಮ್ಮುಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಮಾದಕವಸ್ತು ಕಳ್ಳಸಾಗಣೆದಾರರು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಗುಂಡಿನ ಚಕಮಕಿಯಲ್ಲಿ ಅಪರಿಚಿತ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದರು.

ಅಚ್ಚರಿ ಎಂಬಂತೆ ಪೊಲೀಸರು ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದರು. ಮುಹಮ್ಮದ್ ಪರ್ವಾಝ್ ಅವರನ್ನು ಮಾದಕವಸ್ತು ಮಾರಾಟಗಾರ ಎಂದು ಹೇಳಿದ್ದಕ್ಕೆ ಸ್ಥಳೀಯ ಮಾಧ್ಯಮಗಳನ್ನು ದೂಷಿಸಿದರು.

ಆದರೆ, ಸಂತ್ರಸ್ತನ ಕುಟುಂಬ ಮತ್ತು ಬುಡಕಟ್ಟು ಸಮುದಾಯ ಪೊಲೀಸರ ಆರೋಪವನ್ನು ಬಲವಾಗಿ ನಿರಾಕರಿಸಿದೆ.  ಈ ಬಗ್ಗೆ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಮತ್ತು ಇತರ ನಾಯಕರು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.

ಗುಜ್ಜರ್ ಬಕರ್ವಾಲ್ ಸಮುದಾಯದ ಆಕ್ರೋಶವನ್ನು ನಿಯಂತ್ರಿಸುವ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಪರ್ವಾಝ್ ಹುತಾತ್ಮರಾಗಿದ್ದು, ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ತನಿಖೆಗೆ ಎಸ್ಐಟಿಯನ್ನು ರಚಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ʼಆ ಹುಡುಗ ಹುತಾತ್ಮ ಮತ್ತು ಅವನ ಸಹೋದ್ಯೋಗಿಗಳಿಗೆ ಈ ಸಂಗತಿ ತಿಳಿದಿದೆ. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಉದ್ದೇಶ, ಅದನ್ನು ಮುರಿಯುವುದಲ್ಲ. ನಾವು ಎಸ್ಐಟಿಯನ್ನು ರಚಿಸಿದ್ದೇವೆ ಮತ್ತು ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದೇವೆʼ ಎಂದು ದಕ್ಷಿಣ ಜಮ್ಮು ನಗರ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಶರ್ಮಾ ಹೇಳಿದರು.

ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹತ್ಯೆಯನ್ನು "ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ" ಎಂದು ಕರೆದಿದ್ದಾರೆ. ಪೊಲೀಸರು ವಿವೇಚನೆಯಿಲ್ಲದೆ ಬಲಪ್ರಯೋಗವನ್ನು ಮಾಡಬಾರದು. ಈ ಕುರಿತು ಪಾರದರ್ಶಕವಾಗಿ ತನಿಖೆ ನಡೆಸಬೇಕು. ಮುಹಮ್ಮದ್ ಪರ್ವಾಝ್ ಅವರ ಕುಟುಂಬಕ್ಕೆ ನಾನು ಸಂತಾಪವನ್ನು ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News