ಯಮುನಾ ನದಿಯ ಸ್ವಚ್ಛತೆಯ ಕುರಿತು ರೀಲ್ ಮಾಡುವ ವೇಳೆ ನದಿಗೆ ಜಾರಿ ಬಿದ್ದ ಬಿಜೆಪಿ ಶಾಸಕ; ವಿಡಿಯೋ ವೈರಲ್
Screengrab:X/@AjitSinghRathi
ಹೊಸದಿಲ್ಲಿ: ಯಮುನಾ ನದಿಯ ಸ್ವಚ್ಛತೆಯ ಕುರಿತು ಜಾಗೃತಿ ಅಭಿಯಾನಕ್ಕಾಗಿ ರೀಲ್ ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ದಿಲ್ಲಿ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ನದಿಗೆ ಜಾರಿ ಬಿದ್ದ ಘಟನೆ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಛತ್ ಪೂಜಾ ಹಬ್ಬದ ಹಿನ್ನೆಲೆಯಲ್ಲಿ ಯಮುನಾ ನದಿಯ ಮಾಲಿನ್ಯ ಕುರಿತ ರಾಜಕೀಯ ಚರ್ಚೆಗಳು ಕಾವೇರಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 19 ಸೆಕೆಂಡ್‌ಗಳ ವೀಡಿಯೊದಲ್ಲಿ ಪತ್ಪರ್‌ಗಂಜ್ ಕ್ಷೇತ್ರದ ಶಾಸಕ ನೇಗಿ ಅವರು ನದಿಯ ದಡದಲ್ಲಿ ಎರಡು ಬಾಟಲಿಗಳನ್ನು ಹಿಡಿದು ನಿಂತು ಮಾತನಾಡುತ್ತಿರುವುದು ಕಾಣಿಸುತ್ತದೆ. ಕೆಲ ಕ್ಷಣಗಳಲ್ಲೇ ಅವರು ಮಂಡಿಯೂರಿ ಕುಳಿತ ಸ್ಥಳದಿಂದ ಏಳುವ ವೇಳೆ ಸಮತೋಲನ ಕಳೆದುಕೊಂಡು ನದಿಗೆ ಜಾರಿ ಬೀಳುತ್ತಾರೆ. ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬರು ಸಹಾಯ ಮಾಡಲು ಪ್ರಯತ್ನಿಸಿದರೂ, ಅವರನ್ನು ಬೀಳದಂತೆ ತಡೆಯಲು ಸಾಧ್ಯವಾಗುವುದಿಲ್ಲ. ನೇಗಿ ನೀರಿನಲ್ಲಿ ಬಿದ್ದ ಬಳಿಕ ಬಿದಿರನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯ ಬಳಿಕ ಆಮ್ ಆದ್ಮಿ ಪಕ್ಷದ ಶಾಸಕ ಸಂಜೀವ್ ಝಾ ಅವರು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಖಾಲಿ ಭರವಸೆ ನೀಡುವುದು ದಿಲ್ಲಿಯ ಬಿಜೆಪಿ ನಾಯಕರಿಗೆ ವೃತ್ತಿಯಾಗಿದೆ. ಬಹುಶಃ ಸುಳ್ಳು ಮತ್ತು ಪ್ರದರ್ಶನದ ರಾಜಕೀಯದಿಂದ ಬೇಸತ್ತ ಯಮುನಾ ಮಯ್ಯ ಸ್ವತಃ ಅವರನ್ನು ತನ್ನತ್ತ ಕರೆದಿದ್ದಾಳೆ,” ಎಂದು ಅವರು ಟ್ವೀಟ್‌ನಲ್ಲಿ ನೇಗಿಯವರ ನಡೆಯನ್ನು ವ್ಯಂಗ್ಯವಾಡಿದ್ದಾರೆ.
ದಿಲ್ಲಿಯಲ್ಲಿ ಆಡಳಿತಾರೂಢ ಎಎಪಿ ಮತ್ತು ವಿರೋಧ ಪಕ್ಷದ ಬಿಜೆಪಿ ನಡುವಿನ ರಾಜಕೀಯ ವಾಗ್ವಾದ ಈಗ ಮತ್ತಷ್ಟು ತೀವ್ರಗೊಂಡಿದ್ದು, ಛತ್ ಪೂಜಾ ಸಿದ್ಧತೆಗಳ ಮಧ್ಯೆ ಎರಡೂ ಪಕ್ಷಗಳು ಯಮುನಾ ಶುದ್ಧೀಕರಣದ ಕುರಿತು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಇತ್ತೀಚೆಗೆ ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು ದಿಲ್ಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಯಮುನಾ ನದಿಯನ್ನು ಶುದ್ಧೀಕರಿಸಲಾಗಿದೆ ಎಂಬ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ಸವಾಲು ಹಾಕಿದ್ದರು. “ಯಮುನಾ ಶುದ್ಧವಾಗಿದೆ ಎಂದಾದರೆ ನದಿಯ ನೀರನ್ನೇ ಕುಡಿಯಲಿ” ಎಂದು ಹೇಳಿ, ಮಣ್ಣಿನ ಬಣ್ಣದ ನೀರಿನಿಂದ ತುಂಬಿದ ಬಾಟಲಿಯನ್ನು ಮುಖ್ಯಮಂತ್ರಿ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದರು.
क्या विधायक जी, कितना नाटक करोगे, इसी नाटकबाजी के लिए मोदी जी के नाम पर इलेक्शन जीते थे क्या ?
— Ajit Singh Rathi (@AjitSinghRathi) October 26, 2025
ये है दिल्ली से भाजपा विधायक रवि नेगी, यमुना की सफाई को लेकर रील बना रहे थे, पैर फिसला और सीधे यमुना में जा गिरे। बस रील बननी चाहिए चाहे ख़ुद की रेल बन जाय। @BJP4India @BJP4Delhi pic.twitter.com/uLcQoVqBwe