×
Ad

ಅಜ್ಮೀರ್ ದರ್ಗಾ ಖಾದಿಮ್‌ ಗಳ ಸೊಸೈಟಿಗಳ ಆಡಿಟ್‌ ಗೆ ದಿಲ್ಲಿ ಹೈಕೋರ್ಟ್ ತಡೆ

Update: 2025-05-22 23:26 IST

 ದಿಲ್ಲಿ ಹೈಕೋರ್ಟ್ | PTI

ಹೊಸದಿಲ್ಲಿ: ಅಜ್ಮೀರ್ ದರ್ಗಾದ ಖಾದಿಮ್‌ ಗಳ ಎರಡು ನೋಂದಾಯಿತ ಸೊಸೈಟಿಗಳ ಲೆಕ್ಕ ಪರಿಶೋಧನೆ ಪ್ರಕ್ರಿಯೆಗಳಿಗೆ ದಿಲ್ಲಿ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ಸಿಎಜಿ ಕಾಯ್ದೆ(ಕರ್ತವ್ಯಗಳು, ಅಧಿಕಾರಗಳು ಮತ್ತು ಸೇವಾ ಷರತ್ತುಗಳು) ಕಾಯ್ದೆ, 1971ರ ನಿಬಂಧನೆಯ ಅಡಿ ಅಗತ್ಯಗಳನ್ನು ಪಾಲಿಸಲಾಗಿಲ್ಲ ಎನ್ನುವುದನ್ನು ಗಮನಿಸಿದ ಬಳಿಕ ನ್ಯಾಯಾಲಯವು ಮುಂದಿನ ವಿಚಾರಣಾ ದಿನಾಂಕವಾದ ಜು.28ರ ವರೆಗೆ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿತು.

ಮೇ 14ರಂದು ಹೊರಡಿಸಲಾದ ಆದೇಶದಲ್ಲಿ ನ್ಯಾ.ಸಚಿನ್ ದತ್ತಾ ಅವರು, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಆಡಿಟ್ ಬಗ್ಗೆ ನೋಂದಾಯಿತ ಸೊಸೈಟಿಗಳಿಗೆ ಸೂಚನೆ ನೀಡಿದ್ದಾಗ 2024, ಮಾ.15ಕ್ಕೆ ಇದ್ದಂತೆ ಅರ್ಜಿದಾರರ ಸೊಸೈಟಿಗಳ ಆಡಿಟ್ ನಡೆಸಲು ಸಿಎಜಿ ಒಪ್ಪಿಕೊಂಡಿರಲಿಲ್ಲ ಎನ್ನುವುದನ್ನು ಬೆಟ್ಟು ಮಾಡಿದ್ದಾರೆ. ಪ್ರಸಕ್ತ ಪ್ರಕರಣದಲ್ಲಿ ಸಿಎಜಿ ಕಾಯ್ದೆಯ ಕಲಂ 20ರಡಿಯ ಅಗತ್ಯಗಳನ್ನು ಪೂರೈಸಲಾಗಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಇದು ಪುಷ್ಟಿ ನೀಡುತ್ತದೆ ಎಂದೂ ಅವರು ಹೇಳಿದ್ದಾರೆ.

ಅಜ್ಮೀರ್ ದರ್ಗಾದಲ್ಲಿ ಸಾಂಪ್ರದಾಯಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಖಾದಿಮ್‌ ಗಳನ್ನು ಪ್ರತಿನಿಧಿಸುವ ಎರಡು ನೋಂದಾಯಿತ ಸೊಸೈಟಿಗಳು ಆಡಿಟ್‌ನ್ನು ನಿರ್ಬಂಧಿಸುವಂತೆ ಕೋರಿ ದಿಲ್ಲಿ ಉಚ್ಛ ನ್ಯಾಯಾಲಯದ ಮೊರೆ ಹೋಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News