×
Ad

ಹವಾನಿಯಂತ್ರಣ ಸಮಸ್ಯೆ : ದಿಲ್ಲಿ-ಸಿಂಗಾಪುರ ಏರ್ ಇಂಡಿಯಾ ವಿಮಾನ ಆರು ಗಂಟೆ ತಡವಾಗಿ ಹಾರಾಟ, ಪ್ರಯಾಣಿಕರ ಪರದಾಟ

Update: 2025-09-11 11:13 IST

Photo | The Hindu

ಹೊಸ ದಿಲ್ಲಿ: ವಿಮಾನದಲ್ಲಿನ ಹವಾನಿಯಂತ್ರಣ ಸಮಸ್ಯೆಯಿಂದಾಗಿ ದಿಲ್ಲಿಯಿಂದ ಸಿಂಗಾಪುರಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಆರು ಗಂಟೆಗಳಷ್ಟು ತಡವಾಗಿ ಹಾರಾಟ ನಡೆಸಿರುವ ಬಗ್ಗೆ ವರದಿಯಾಗಿದೆ.

ಬೋಯಿಂಗ್ 787-9 (ವಿಮಾನ ಸಂಖ್ಯೆ ಎಐ2380) ದಿಲ್ಲಿ ವಿಮಾನ ನಿಲ್ದಾಣದಿಂದ ಸಿಂಗಾಪುರಗೆ ಬುಧವಾರ ರಾತ್ರಿ ಸುಮಾರು 11 ಗಂಟೆಗೆ ನಿರ್ಗಮಿಸಬೇಕಿತ್ತು. ಆದರೆ, ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಕಂಡು ಬಂದ ಸಮಸ್ಯೆಯಿಂದಾಗಿ, ಅದಾಗಲೇ ಎರಡು ಗಂಟೆಗಳಿಂದ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಬೇರೆ ವಿಮಾನದಲ್ಲಿ ಆರು ಗಂಟೆ ತಡವಾಗಿ ಸಿಂಗಾಪುರಗೆ ಕಳುಹಿಸಲಾಗಿದೆ.  

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ವಿಮಾನ ನಿಲ್ದಾಣದಲ್ಲಿ  ಪ್ರಯಾಣಿಕರು ಪರದಾಟ ನಡೆಸುತ್ತಿರುವುದು ಹಾಗೂ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News