×
Ad

ದುಬೈ- ಜೈಪುರ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನಿಂದ ದುರ್ವರ್ತನೆ

Update: 2025-06-29 11:55 IST

ಸಾಂದರ್ಭಿಕ ಚಿತ್ರ 

ಜೈಪುರ: ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ವಿಮಾನದ ಕ್ಯಾಬಿನ್ ಸಿಬ್ಬಂದಿ ಜತೆ ಪಾನಮತ್ತ ಪ್ರಯಾಣಿಕನೊಬ್ಬ ದುರ್ವರ್ತನೆ ಪ್ರದರ್ಶಿದ ಪ್ರಕರಣ ನಡೆದಿದೆ ಎಂದು ಏರ್ ಇಂಡಿಯಾ ಶನಿವಾರ ಪ್ರಕಟಿಸಿದೆ.

ಪ್ರಯಾಣಿಕ ಈ ದುರ್ನಡತೆ ಪ್ರದರ್ಶಿದ ವೇಳೆ ಪಾನಮತ್ತನಾಗಿದ್ದ ಮತ್ತು ಕ್ಯಾಬಿನ್ ಸಿಬ್ಬಂದಿ ಜತೆ ಆತನ ವರ್ತನೆ ಅಸಮಂಜಸವಾಗಿತ್ತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ವಿಮಾನ ಜೈಪುರದಲ್ಲಿ ಇಳಿದ ಬಳಿಕ ಸಂಸ್ಥೆ ಈ ಪ್ರಕರಣದ ಬಗ್ಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ದೂರು ನೀಡಿದೆ. ಇದರ ಆಧಾರದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಧಿಕೃತ ದೂರು ದಾಖಲಿಸಲಾಗಿದೆ ಎಂದು ಎಎನ್‍ಐ ವರದಿ ಮಾಡಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಯಾಣಿಕ ಏನು ಮಾಡಿದ್ದ ಹಾಗೂ ಪ್ರಯಾಣಿಕನ ಗುರುತಿನ ವಿವರಗಳನ್ನು ಏರ್ ಇಂಡಿಯಾ ಬಹಿರಂಗಪಡಿಸಿಲ್ಲ.

ಇಂಥದ್ದೇ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಅಮೃತಸರ- ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮತ್ತೊಬ್ಬ ಪಾನಮತ್ತ ಪ್ರಯಾಣಿಕ, ಮಹಿಳಾ ಸಿಬ್ಬಂದಿ ಜತೆಗೆ ಜಗಳವಾಡಿದ್ದಾನೆ. ವಿಮಾನ ನಿಲ್ದಾಣದಲ್ಲಿ ಇಳಿಯುವ ಸ್ವಲ್ಪ ಮೊದಲು ಪ್ರಯಾಣಿಕ, ಮಹಿಳಾ ಸಿಬ್ಬಂದಿಗೆ ಚಪ್ಪಲಿ ತೋರಿಸಿ ಬೆದರಿಸಿದ್ದ ಎಂದು ಹೇಳಲಾಗಿದೆ.

ಈ ಪ್ರಯಾಣಿಕನನ್ನು ವಿಮಾನ ಇಳಿದ ಬಳಿಕ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News