×
Ad

ಜಾರಿ ನಿರ್ದೇಶನಾಲಯ ಅಮಿತ್ ಶಾ, ಮೋದಿಯ ಸಾಕು ನಾಯಿ: ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್

Update: 2025-03-10 12:25 IST

ಮಾಣಿಕ್ಕಂ ಠಾಗೋರ್ (Photo: PTI)

ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಸಾಕುನಾಯಿ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಟೀಕಿಸಿದ್ದಾರೆ.

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪುತ್ರ ಚೈತನ್ಯ ಬಘೇಲ್ ಮತ್ತು ಆಪ್ತರಿಗೆ ಸೇರಿದ 14 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಮಾಣಿಕ್ಕಂ ಠಾಗೋರ್, ಈಡಿಯು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರ ಸಾಕುನಾಯಿಯಾಗಿರುವುದು ನಮಗೆಲ್ಲರಿಗೂ ತಿಳಿದಿದೆ. ಅವರು ಈ ನಾಯಿಯನ್ನು ಎಲ್ಲಿ ಬೇಕಾದರೂ ಕಳುಹಿಸಬಹುದು. ಭೂಪೇಶ್ ಬಘೇಲ್ ಕಾಂಗ್ರೆಸ್‌ನ ಪ್ರಬಲ ನಾಯಕರಾಗಿದ್ದಾರೆ. ಅವರು ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಛತ್ತೀಸ್‌ಗಢದ ಜನತೆ ಭೂಪೇಶ್ ಬಘೇಲ್ ಅವರ ಜೊತೆಗಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನ ಈ ನಕಲಿ ನಿರೂಪಣೆಗಳನ್ನು ಸೋಲಿಸಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News