×
Ad

650 ಕೋ.ರೂ.ಗಳ ನಕಲಿ ಐಟಿಸಿ ಪ್ರಕರಣ : ದೇಶದ ವಿವಿಧೆಡೆಗಳಲ್ಲಿ ಈ.ಡಿ.ದಾಳಿ

Update: 2025-09-11 22:04 IST

ಈ.ಡಿ 

ಹೊಸದಿಲ್ಲಿ,ಸೆ.11: 650 ಕೋ.ರೂ.ಗಳ ನಕಲಿ ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಕ್ಲೇಮ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಈ.ಡಿ.) ಗುರುವಾರ ವಿವಿಧ ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗುವಾಹಟಿ ಈ.ಡಿ.ಕಚೇರಿಯ ಅಧಿಕಾರಿಗಳು ಅರುಣಾಚಲ ಪ್ರದೇಶ, ಹರ್ಯಾಣ, ದಿಲ್ಲಿ, ತಮಿಳುನಾಡು ಮತ್ತು ತೆಲಂಗಾಣದ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ದಾಳಿ ಕಾರ್ಯಾಚರಣೆಗಳು ನಡೆದಿವೆ ಎಂದು ಮೂಲಗಳು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News