×
Ad

ಮೇಘಾಲಯ: ಸಚಿವ ಸಂಪುಟ ಪುನರ್ ರಚನೆಗೆ ಕೆಲವೇ ಗಂಟೆಗಳ ಮೊದಲು ಎಂಟು ಮಂದಿ ಸಚಿವರು ರಾಜೀನಾಮೆ

Update: 2025-09-16 16:18 IST

ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ (Photo: PTI)

ಹೊಸದಿಲ್ಲಿ : ಮೇಘಾಲಯ ಸಚಿವ ಸಂಪುಟ ಪುನರ್ ರಚನೆಗೆ ಕೆಲವೇ ಗಂಟೆಗಳ ಮೊದಲು ಎ.ಎಲ್. ಹೆಕ್, ಪಾಲ್ ಲಿಂಗ್ಡೋ ಸೇರಿದಂತೆ ಎಂಟು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಹೊಸ ಸಚಿವರು ಮಂಗಳವಾರ ಸಂಜೆ 5 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವರಾದ ಎನ್‌ಪಿಪಿಯ ಅಂಪಾರೀನ್ ಲಿಂಗ್ಡೋ, ಕಮಿಂಗೋನ್ ಯಂಬೋನ್, ರಕ್ಕಮ್ ಎ. ಸಂಗ್ಮಾ, ಅಬು ತಾಹೆರ್ ಮೊಂಡಲ್, ಯುಡಿಪಿಯ ಪಾಲ್ ಲಿಂಗ್ಡೋ ಮತ್ತು ಕಿರ್ಮೆನ್ ಶಿಲ್ಲಾ, ಎಚ್ಎಸ್‌ಪಿಡಿಪಿಯ ಶಕ್ಲಿಯಾರ್ ವಾರ್ಜ್ರಿ ಮತ್ತು ಬಿಜೆಪಿಯ ಎ.ಎಲ್. ಹೆಕ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎನ್‌ಪಿಪಿ ಶಾಸಕರಾದ ವೈಲಾದ್ಮಿಕಿ ಶಿಲ್ಲಾ, ಸೊಸ್ತೇನೆಸ್ ಸೊಹ್ತುನ್, ಬ್ರೆನಿಂಗ್ ಎ. ಸಂಗ್ಮಾ ಮತ್ತು ತಿಮೋತಿ ಡಿ. ಶಿರಾ ಅವರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News