×
Ad

ನಿಯಮಗಳ ಉಲ್ಲಂಘನೆ : 474 ಪಕ್ಷಗಳನ್ನು ಪಟ್ಟಿಯಿಂದ ತೆಗೆದು ಹಾಕಿದ ಚುನಾವಣಾ ಆಯೋಗ!

Update: 2025-09-19 20:12 IST

ಚುನಾವಣಾ ಆಯೋಗ | PTI

ಹೊಸದಿಲ್ಲಿ,ಸೆ.19: ಕಳೆದ ಆರು ವರ್ಷಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸದಿರುವುದು ಸೇರಿದಂತೆ ನಿಯಮಗಳ ಉಲ್ಲಂಘನೆಗಾಗಿ ಇನ್ನೂ 474 ಮಾನ್ಯತೆ ಹೊಂದಿರದ ನೋಂದಾಯಿತ ಪಕ್ಷಗಳನ್ನು ಸೆ.18ರಂದು ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಚುನಾವಣಾ ಆಯೋಗವು ಶುಕ್ರವಾರ ತಿಳಿಸಿದೆ. ಇದರೊಂದಿಗೆ ಕಳೆದ ಎರಡು ತಿಂಗಳಲ್ಲಿ ಪಟ್ಟಿಯಿಂದ ತೆಗೆದುಹಾಕಲಾಗಿರುವ ಇಂತಹ ಪಕ್ಷಗಳ ಸಂಖ್ಯೆ 808ಕ್ಕೇರಿದೆ.

ಪ್ರಕ್ರಿಯೆಯ ಮೊದಲ ಹಂತದಲ್ಲಿ ಆ.9ರಂದು 334 ನೋಂದಾಯಿತ, ಮಾನ್ಯತೆ ಹೊಂದಿರದ ರಾಜಕೀಯ ಪಕ್ಷಗಳನ್ನು(ಆರ್‌ಯುಪಿಪಿ) ಚುನಾವಣಾ ಆಯೋಗವು ಪಟ್ಟಿಯಿಂದ ತೆಗೆದುಹಾಕಿತ್ತು.

ತೀರ ಇತ್ತೀಚಿನವರೆಗೂ 2,520 ಆರ್‌ಯುಪಿಪಿಗಳಿದ್ದವು. 474 ಪಕ್ಷಗಳನ್ನು ಪಟ್ಟಿಯಿಂದ ಕೈಬಿಟ್ಟ ಬಳಿಕ ಈಗ 2,046 ಆರ್‌ಯುಪಿಪಿಗಳು ಉಳಿದುಕೊಂಡಿವೆ.

ಅಲ್ಲದೆ , ಮಾನ್ಯತೆ ಪಡೆದಿರುವ ಆರು ರಾಷ್ಟ್ರೀಯ ಮತ್ತು 67 ಪ್ರಾದೇಶಿಕ ಪಕ್ಷಗಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News