×
Ad

ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ತನಿಖೆಗೆ ಆಗ್ರಹಿಸಲು ರಾಷ್ಟ್ರೀಯ ಆಂದೋಲನ ಅಗತ್ಯ: ಗೌರವ್ ಗೊಗೋಯಿ

Update: 2025-11-06 21:59 IST

ಗೌರವ್ ಗೊಗೋಯಿ | Photo Credit : PTI

ಗುವಾಹಟಿ, ನ. 6: ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ತನಿಖೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೋಯಿ ಗುರುವಾರ ರಾಷ್ಟ್ರೀಯ ಆಂದೋಲನಕ್ಕೆ ಕರೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಕುರಿತು ಆರೋಪಿಸಿದ ಹಿನ್ನೆಲೆಯಲ್ಲಿ ಗೌರವ್ ಗೊಗೋಯಿ ರಾಷ್ಟ್ರೀಯ ಆಂದೋಲನಕ್ಕೆ ಕರೆ ನೀಡಿದ್ದಾರೆ.

ಮತಗಳ್ಳತನದ ಬಗ್ಗೆ ಚುನಾವಣಾ ಆಯೋಗದ ನಿಷ್ಕ್ರಿಯತೆ ತಪ್ಪನ್ನು ಒಪ್ಪಿಕೊಂಡಂತೆ ಹಾಗೂ ಭಾರತದ ಜನರಿಗೆ ಆದ ಅನ್ಯಾಯವನ್ನು ಮರೆ ಮಾಚುವ ವ್ಯರ್ಥ ಪ್ರಯತ್ನದಂತೆ ಕಾಣುತ್ತದೆ ಎಂದು ಗೊಗೋಯಿ ‘ಎಕ್ಸ್’ನ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಅದನ್ನು ಸುಧಾರಿಸುವಂತೆ ಆಗ್ರಹಿಸಲು ರಾಷ್ಟ್ರೀಯ ಆಂದೋಲನ ನಡೆಯಬೇಕು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News