×
Ad

ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಹೆಸರು : ಪ್ರಶಾಂತ್ ಕಿಶೋರ್‌ಗೆ ಚುನಾವಣಾ ಆಯೋಗ ನೋಟಿಸ್

Update: 2025-10-28 19:18 IST

ಪ್ರಶಾಂತ್ ಕಿಶೋರ್| PTI 

ಹೊಸ ದಿಲ್ಲಿ: ಚುನಾವಣಾ ತಂತ್ರಜ್ಞ ಹಾಗೂ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೆಸರು ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳೆರಡರ ಮತಪಟ್ಟಿಗಳಲ್ಲಿರುವುದು ಕಂಡು ಬಂದ ಹಿನ್ನೆಲೆ ಚುನಾವಣಾ ಆಯೋಗ ಅವರಿಂದ ವಿವರಣೆ ಕೋರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಇನ್ನು ಮೂರು ದಿನಗಳೊಳಗಾಗಿ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿದೆ.

ಇದಕ್ಕೆ ಪ್ರತಿಯಾಗಿ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳೆರಡರ ಮತಪಟ್ಟಿಗಳಲ್ಲೂ ತಮ್ಮ ಹೆಸರಿರುವುದರನ್ನು ದೃಢಪಡಿಸಿರುವ ಪ್ರಶಾಂತ್ ಕಿಶೋರ್, ಇದು ಚುನಾವಣಾ ಆಯೋಗದ ನಿರ್ಲಕ್ಷ್ಯದಿಂದಾಗಿರುವ ತಪ್ಪೇ ಹೊರತು ನನ್ನಿಂದಾಗಿರುವುದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಂನಲ್ಲಿನ ಕರ್ಗಹಾರ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೀಡಿರುವ ನೋಟಿಸ್ ಪ್ರಕಾರ, ಪ್ರಶಾಂತ್ ಕಿಶೋರ್ ಕರ್ಗಹಾರ್ ವಿಧಾನಸಭಾ ಕ್ಷೇತ್ರದ ಕೋನಾರ್ ಉತ್ತರ ವಿಭಾಗದ ಮಾಧ್ಯಮಿಕ ಶಾಲೆಯೇ ಅವರ ಮತಗಟ್ಟೆಯಾಗಿದೆ.  

ಇದೇ ವೇಳೆ, ಪಶ್ಚಿಮ ಬಂಗಾಳದ ಭಬಾನಿಪುರ್ ವಿಧಾನಸಭಾ ಕ್ಷೇತ್ರದ ಬಿ.ರಾಣಿಶಂಕರಿ ಲೇನ್‌ನಲ್ಲಿರುವ ಸೇಂಟ್ ಹೆಲೆನ್ ಶಾಲೆಯ ಮತಗಟ್ಟೆಯ ಮತಪಟ್ಟಿಯಲ್ಲೂ ಪ್ರಶಾಂತ್ ಕಿಶೋರ್ ಹೆಸರು ದಾಖಲಾಗಿರುವುದು ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News