×
Ad

ಪುಣೆಯ ಮೇಣದಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅಪಘಾತ ; ಮೃತರ ಸಂಖ್ಯೆ 14ಕ್ಕೆ ಏರಿಕೆ

Update: 2023-12-18 21:13 IST

Photo: PTI 

ಪುಣೆ: ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿರುವ ಮೇಣದಬತ್ತಿ ತಯಾರಿಕಾ ಘಟಕವೊಂದರಲ್ಲಿ ಡಿಸೆಂಬರ್ 8ರಂದು ನಡೆದ ಬೆಂಕಿ ಅಪಘತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 14ಕ್ಕೆ ಏರಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಕೊನೆಯುಸಿರೆಳೆದಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ, ಪೊಲೀಸರು ಮೇಣದಬತ್ತಿ ತಯಾರಿಕಾ ಕಾರ್ಖಾನೆಯ ಮಾಲೀಕ ಶರದ್ ಸೂತರ್‌ರನ್ನು ಬಂಧಿಸಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಅವರನ್ನು ಬಂಧಿಸಲಾಗಿದೆ. ಬೆಂಕಿಯಲ್ಲಿ ಅವರೂ ಗಾಯಗೊಂಡಿದ್ದರು.

‘‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಕಮಲ್ ಚೌರೆ ಶನಿವಾರ ಮತ್ತು 40 ವರ್ಷದ ಉಷಾ ಪದ್ವಿ ರವಿವಾರ ಮೃತಪಟ್ಟಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹುಟ್ಟುಹಬ್ಬದ ಆಚರಣೆಗಳಲ್ಲಿ ಬಳಸುವ ಮಿನುಗುವ ಮೇಣದಬತ್ತಿಗಳ ತಯಾರಿಕೆ ಪ್ರಸಿದ್ಧವಾಗಿದ್ದ ಕಾರ್ಖಾನೆಯಲ್ಲಿ ಡಿಸೆಂಬರ್ 8ರ ಅಪರಾಹ್ನ ಬೆಂಕಿ ಹೊತ್ತಿಕೊಂಡಿತ್ತು.

ಅದೇ ದಿನ ಆರು ಮಂದಿ ಮೃತಪಟ್ಟರು ಮತ್ತು 10 ಮಂದಿ ಗಂಭೀರವಾಗಿ ಗಾಯಗೊಂಡರು. ಅವರ ಪೈಕಿ ಹಲವರು ನಂತರದ ದಿನಗಳಲ್ಲಿ ಕೊನೆಯುಸಿರೆಳೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News