×
Ad

ಗುಜರಾತ್ | 10 ತಿಂಗಳ ಮಗುವಿನ ಮೇಲೆ ಅತ್ಯಾಚಾರ

Update: 2024-09-24 22:13 IST

ಸಾಂದರ್ಭಿಕ ಚಿತ್ರ

ಭರೂಚ್ : ಗುಜರಾತ್‌ನ ಭರೂಚ್‌ನಲ್ಲಿರುವ ಪನೊಲಿ ಗ್ರಾಮದಲ್ಲಿ ರವಿವಾರ 30 ವರ್ಷದ ವ್ಯಕ್ತಿಯೊಬ್ಬ 10 ತಿಂಗಳ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದ ಮಗುವನ್ನು ಆರೋಪಿ ದೀಪಕ್ ಕುಮಾರ್ ಲಾಲ್‌ಬಾಬು ಸಿಂಗ್ ಎತ್ತಿಕೊಂಡು ಸಮೀಪದಲ್ಲಿರುವ ತನ್ನ ಮನೆಗೆ ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಉಪ ಪೊಲೀಸ್ ಸೂಪರಿಂಟೆಂಡೆಂಟ್ ಕುಶಾಲ್ ಓಝ ತಿಳಿಸಿದರು.

ಮಗುವಿನ ತಾಯಿ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗೆ ಮಗು ಮತ್ತು ಅದರ ಕುಟುಂಬ ಸದಸ್ಯರ ಪರಿಚಯವಿತ್ತು. ಆತನು ಆಗಾಗ ಮನೆಗೆ ಬಂದು ಮಗುವಿನ ಜೊತೆ ಆಡುತ್ತಿದ್ದ. ರವಿವಾರವೂ ಹಾಗೆ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಅಳುವನ್ನು ಕೇಳಿ ಅಜ್ಜಿ ಧಾವಿಸಿದಾಗ, ಮಗು ತೀವ್ರವಾಗಿ ಗಾಯಗೊಂಡಿತ್ತು ಮತ್ತು ತೀವ್ರ ರಕ್ತಸ್ರಾವವಾಗುತ್ತಿತ್ತು. ಬಳಿಕ ಸ್ಥಳೀಯರು ಒಟ್ಟಾಗಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುದ್ದಿ ಕೇಳಿ ಧಾವಿಸಿ ಬಂದ ತಾಯಿ ಮಗುವನ್ನು ಭರೂಚ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ತೀವ್ರ ಗಾಯ ಮತ್ತು ರಕ್ತಸ್ರಾವದಿಂದಾಗಿ ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News