×
Ad

ಗುಜರಾತ್: ಪ್ರವಾಹಕ್ಕೆ ಭಾಗಶಃ ಕೊಚ್ಚಿಹೋದ ಏಕತಾ ಪ್ರತಿಮೆಯ ರಸ್ತೆ

Update: 2024-08-30 22:31 IST

PC : X 

 ̇ವಡೋದರಾ : ಗುಜರಾತ್ ನಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಏಕತಾ ಪ್ರತಿಮೆಗೆ ತೆರಳುವ ರಸ್ತೆಯ ಒಂದು ಭಾಗ ಕೊಚ್ಚಿಹೋಗಿದೆ.

ದಭೋಯ್ ರಸ್ತೆಯ ರಾಜ್ವಿ ಕ್ರಾಸಿಂಗ್ ಬಳಿ ಹೆದ್ದಾರಿಯಲ್ಲಿ ದೊಡ್ಡ ಬಿರುಕುಗಳು ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಪಘಾತಗಳನ್ನು ತಪ್ಪಿಸಲು ಮುಚ್ಚಲಾಗಿದೆ. ರಸ್ತೆಯ ಇನ್ನೊಂದು ಬದಿ ಮಾತ್ರ ಸಂಚಾರಕ್ಕೆ ಮುಕ್ತವಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಏಕತೆಯ ಪ್ರತಿಮೆಗೆ ಭೇಟಿ ನೀಡುವವರು ಈ ಮಾರ್ಗವನ್ನು ಬಳಸುವುದರಿಂದ ಈ ರಸ್ತೆಯು ಜನನಿಬಿಡವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಪ್ರವಾಹದಿಂದ ನೀರಿನ ಮಟ್ಟ ಏರಿದ್ದರಿಂದ, ಧಾಧಾರ್ ನದಿಯ ನೀರು ಈ ಪ್ರದೇಶವನ್ನು ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News