×
Ad

ಗುಜರಾತ್ | ಕಳ್ಳತನದ ಶಂಕೆ ; ವ್ಯಕ್ತಿಯನ್ನು ಕಾರಿನ ಬಾನೆಟ್‌ಗೆ ಕಟ್ಟಿ ಮೆರವಣಿಗೆ

Update: 2024-08-31 21:22 IST

PC : X 

ಪಂಚಮಹಲ್ : ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಅಂಗಡಿಯ ಮಾಲಿಕನೊಬ್ಬ ವ್ಯಕ್ತಿಯನ್ನು ಕಾರಿನ ಬಾನೆಟ್‌ಗೆ ಕಟ್ಟಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಶುಕ್ರವಾರ ಗುಜರಾತ್ ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಕಂಕುಥಂಭಲದಲ್ಲಿ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಿಶೋರ ಬಾವ್ರಿ ಎಂಬ ವ್ಯಕ್ತಿ ಅಂಗಡಿಗೆ ತೆರಳಿ ಮೂರು ಪ್ಯಾಕೆಟ್ ಹಾಗಲಕಾಯಿ ಬೀಜಗಳನ್ನು ಖರೀದಿಸಿದ್ದ. ಆತ ಅಂಗಡಿಯಿಂದ ತೆರಳುತ್ತಿದ್ದಾಗ ಅಂಗಡಿ ಮಾಲಿಕ ಪರಮಾರ್ ಹಣವನ್ನು ನೀಡಿಲ್ಲ ಎಂದು ಹೇಳಿದ್ದ.

ತಾನು ಹಣ ಕೊಡಲು ಮರೆತಿದ್ದೆ, ಹೀಗಾಗಿ 500 ರೂ.ನೋಟನ್ನು ಪರಮಾರ್‌ ಗೆ ನೀಡಿದ್ದೆ. ಆದರೆ ತಾನು ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿದ್ದ ಪರಮಾರ್ ಗದ್ದಲವೆಬ್ಬಿಸಿದಾಗ ಸ್ಥಳೀಯರು ಅಲ್ಲಿ ಸೇರಿದ್ದರು. ಮನುಭಾಯಿ ಚರಣ್ ಎಂಬಾತನ ನೆರವಿನಿಂದ ತನ್ನನ್ನು ಕಾರಿನ ಬಾನೆಟ್‌ಗೆ ಕಟ್ಟಿದ್ದ ಪರಮಾರ್ ನನ್ನನ್ನು ಥಳಿಸಿದ್ದ ಮತ್ತು ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿದ್ದ ಎಂದು ಬಾವ್ರಿ ದೂರಿನಲ್ಲಿ ತಿಳಿಸಿದ್ದಾನೆ.

ಪರಮಾರ್ ಮತ್ತು ಚರಣ್ ಅವರನ್ನು ಬಂಧಿಸಿರುವ ಪೋಲಿಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News