×
Ad

ಪುಣೆಯಲ್ಲಿ ಭಾರೀ ಮಳೆ: 4 ಮಂದಿ ಇದ್ದ ಹೆಲಿಕಾಪ್ಟರ್ ಪತನ

Update: 2024-08-24 16:16 IST

Photo: NDTV

ಪುಣೆ : ಶನಿವಾರ ಬೀಸಿದ ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪುಣೆಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಕ್ಯಾಪ್ಟನ್ ಸೇರಿದಂತೆ ಒಟ್ಟು ನಾಲ್ವರು ಇದ್ದರು ಎನ್ನಲಾಗಿದೆ.

AW 139 ಎಂಬ ಹೆಲಿಕಾಪ್ಟರ್ ಮುಂಬೈನ ಜುಹುದಿಂದ ಹೈದರಾಬಾದ್‌ಗೆ ಹೋಗುತ್ತಿದ್ದಾಗ ಪೌಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಪೈಲಟ್ ಆನಂದ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೆಲಿಕಾಪ್ಟರನ್ನು ಗ್ಲೋಬಲ್ ವೆಕ್ಟ್ರಾ ಹೆಲಿಕಾರ್ಪ್ ನಿರ್ವಹಿಸುತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News