×
Ad

ಚಪಾತಿಯ ಹಿಟ್ಟಿಗೆ ಮೂತ್ರ ಬೆರೆಸಿದ ಆರೋಪ | ಮನೆಗೆಲಸದ ಮಹಿಳೆಯ ಬಂಧನ

Update: 2024-10-17 20:27 IST

PC: X 

ಗಾಝಿಯಾಬಾದ್ : ಚಪಾತಿಗಾಗಿ ಸಿದ್ದಪಡಿಸುತ್ತಿದ್ದ ಹಿಟ್ಟಿಗೆ ಮೂತ್ರವನ್ನು ಬೆರೆಸಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಗಾಝಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹಿಳೆಯು ನಗರದ ವಿಲಾಸಿ ಪ್ರದೇಶವೊಂದರ ಫ್ಲ್ಯಾಟ್ನಲ್ಲಿ ಮನೆಗೆಲಸದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಆಕೆಯನ್ನು ರೀನಾ ಎಂದು ಗುರುತಿಸಲಾಗಿದೆ. ಆಕೆ ಚಪಾತಿ ತಯಾರಿಸಲು ಹಿಟ್ಟನ್ನು ಸಿದ್ದಪಡಿಸುತ್ತಿದ್ದಾಗ ಅದಕ್ಕೆ ಮೂತ್ರವನ್ನು ಬೆರೆಸಿದ್ದಾಳೆಂದು ಆರೋಪಿಸಿ ಆಕ್ಟೋಬರ್ 14ರಂದು ಮನೆಯ ಮಾಲಕರು ಪೊಲೀಸರಿಗೆ ದೂರು ನೀಡಿದ್ದರು.

ರೀನಾಳವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಆನಂತರ ತಲೆಮರೆಸಿಕೊಂಡಿದ್ದ ರೀನಾಳ ಬಂಧನಕ್ಕೆ ಪೊಲೀಸರು ತಂಡಗಳನ್ನು ರಚಿಸಿದ್ದರು. ಆಕೆಯನ್ನು ಆಕ್ಟೋಬರ್ 15ರಂದು ನಗರದ ಜಿಎಚ್-7 ಸೊಸೈಟಿ ಪ್ರದೇಶದಿಂದ ಬಂಧಿಸಲಾಯಿತು. ರೀನಾಳ ವಿರುದ್ಧ ಮುಂದಿನ ಕಾನೂನುಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News